ಗಂಡು ಮಗುವಿಗೆ ಜನ್ಮ ನೀಡಿದ ರೈಲು ನಿಲ್ದಾಣದಲ್ಲಿ ರಕ್ಷಿಸಲ್ಪಟ್ಟ ಮಹಿಳೆ
ಉಡುಪಿ, ಅ.22: ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿ ರಕ್ಷಿಸಲ್ಪಟ್ಟಿದ್ದ ಗರ್ಭಿಣಿ, ಇದೀಗ ಉಡುಪಿಯ ತಾಯಿ ಮತ್ತು ಮಗು ಸರಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ವಾರಸು ದಾರರು ಕೂಡಲೇ ಸಂಪರ್ಕಿಸುವಂತೆ ಸೂಚಿಸಲಾಗಿದೆ.
ಮೂರು ತಿಂಗಳ ಹಿಂದೆ ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಏಳು ತಿಂಗಳ ಗರ್ಭಿಣಿ ಮಹಿಳೆಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು, ರೈಲ್ವೆ ಪೋಲಿಸರು ಹಾಗೂ ಮಹಿಳಾ ಸಾಂತ್ವನ ಕೇಂದ್ರದ ಸಿಬ್ಬಂದಿ ರಕ್ಷಿಸಿದ್ದರು. ಬಳಿಕ ಆಕೆಗೆ ನಿಟ್ಟೂರು ರಾಜ್ಯ ಮಹಿಳಾ ನಿಲಯದಲ್ಲಿ ಪುರ್ನವಸತಿ ಕಲ್ಪಿಸಲಾಗಿದತ್ತು.
ಇದೀಗ ಆಕೆ ಹೆರಿಗೆಯಾಗಿ ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮಗು ಆರೋಗ್ಯವಾಗಿದ್ದು, ಮಹಿಳಾ ನಿಲಯದ ಪೋಷಣೆ ಯಲ್ಲಿದ್ದಾರೆ. ರಕ್ಷಿಸಲ್ಪಟ್ಟ ಮಹಿಳೆ ಮಾನಸಿಕ ಖಿನ್ನತೆಗೆ ಒಳಪಟ್ಟವರಂತೆ ಕಂಡು ಬಂದಿದ್ದಾರೆ. ಹೆಸರು ಸುಲೇಕಾ , ಪಶ್ಚಿಮ ಬಂಗಾಲ ಎಂದಷ್ಟೆ ವಿಳಾಸ ನೀಡಿದ್ದಾರೆ. ತಾಯಿ ಮಗುವನ್ನು ಕುಟುಂಬಿಕರಿಗೆ ಸೇರಿಸಬೇಕಾಗಿದ್ದು, ಉಡುಪಿಯಲ್ಲಿರುವ ಬಂಗಾಲಿ ಸಂಘ ಸಂಸ್ಥೆಗಳು ಸಹಕರಿಸುವಂತೆಯೂ, ಸಂಬಂಧಿಕರು ತುರ್ತಾಗಿ ರಾಜ್ಯ ಮಹಿಳಾ ನಿಲಯದ ನಾಗರಿಕ ಸಹಾಯವಾಣಿಯನ್ನು ಸಂಪರ್ಕಿಸುವಂತೆ ಸಮಾಜಸೇವಕ ನಿತ್ಯಾನಂದ ಒಳಕಾಡುವರು ವಿನಂತಿಸಿದ್ದಾರೆ.