ಎಟಿಎಂ ಕಾರ್ಡ್ ಬದಲಾಯಿಸಿ ಲಕ್ಷಾಂತರ ರೂ. ವಂಚನೆ: ಪ್ರಕರಣ ದಾಖಲು

Update: 2024-09-20 15:01 GMT

ಅಜೆಕಾರು, ಸೆ.20: ವೃದ್ಧರೊಬ್ಬರ ಎಟಿಎಂ ಕಾರ್ಡ್ ಬದಲಾಯಿಸಿ ಹಣ ಡ್ರಾ ಮಾಡುವ ಮೂಲಕ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮರ್ಣೆ ಗ್ರಾಮದ ಹೆನ್ರಿ ಡಿಸೋಜ(63) ಎಂಬವರು ಸೆ.16ರಂದು ಸಂಜೆ ಪತ್ನಿ ಮೇರಿ ಹೆನ್ರಿ ಡಿಸೋಜ ಎಂಬವರ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಎಟಿಎಂ ಕಾರ್ಡ್‌ನಲ್ಲಿ ಹಣವನ್ನು ತೆಗೆಯಲು ಅಜೆಕಾರಿನ ಎಟಿಎಂಗೆ ಹೋಗಿದ್ದು, ಅಲ್ಲಿ ಇಬ್ಬರು ವ್ಯಕ್ತಿಗಳು ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ಹೆನ್ರಿ ಡಿಸೋಜ ಅವರ ಬಳಿ ಇದ್ದ ಎಟಿಎಂ ಕಾರ್ಡ್ ಪಡೆದು ಪಿನ್ ನಂಬರ್ ತಿಳಿದು, ಅವರ ಕಾರ್ಡ್‌ನ್ನು ಬದಲಾಯಿಸಿದ್ದು, ಬಳಿಕ ಇದರಲ್ಲಿ ಹಣ ಬರುತ್ತಿಲ್ಲ ಎಂದು ಹೇಳಿ ಬೇರೆ ಕಾರ್ಡ್ ವಾಪಾಸ್ಸು ನೀಡಿದರು.

ನಂತರ ಅರೋಪಿಗಳು ಕಾರ್ಕಳದ ಎಟಿಎಂನಿಂದ ಹೆನ್ರಿ ಡಿಸೋಜ ಅವರ ಪತ್ನಿಯ ಬ್ಯಾಂಕ್ ಖಾತೆಯಿಂದ ತಲಾ 10 ಸಾವಿರ ರೂ.ನಂತೆ 10 ಬಾರಿ ಒಟ್ಟು 1 ಲಕ್ಷ ರೂ. ಡ್ರಾ ಮಾಡಿ ಮೋಸ ಮಾಡಿರುವುದಾಗಿ ದೂರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News