ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು

Update: 2023-08-14 16:27 GMT

ಮಲ್ಪೆ, ಆ.14: ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಮೀನು ಗಾರರೊಬ್ಬರು ಅಲೆಗಳ ಅಬ್ಬರಕ್ಕೆ ಬೋಟಿನಿಂದ ಆಯತಪ್ಪಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಆ.13ರಂದು ಮಧ್ಯಾಹ್ನ ವೇಳೆ ನಡೆದಿದೆ.

ಮೃತರನ್ನು ಕುಮಟಾ ತಾಲೂಕಿನ ಸುಬ್ರಮಣ್ಯ ಜಟ್ಟಿ ಅಂಬಿಗ(37) ಎಂದು ಗುರುತಿಸಲಾಗಿದೆ. ಮಲ್ಪೆಯ ಬಾಲಕೃಷ್ಣ ಎಂಬವರ ಬೋಟಿನಲ್ಲಿ ಆ.11ರಂದು ಮಲ್ಪೆ ಬಂದರಿನಿಂದ ಮೀನುಗಾರಿಕೆ ಸಮುದ್ರಕ್ಕೆ ಹೋಗಿದ್ದು ಅಲ್ಲಿ ಬಲೆ ಎಳೆಯುತ್ತಿರು ವಾಗ ಅಲೆಗಳ ಅಬ್ಬರಕ್ಕೆ ಸುಬ್ರಮಣ್ಯ ಆಯತಪ್ಪಿ ನೀರಿಗೆ ಬಿದ್ದು ಮೃತಪಟ್ಟರೆಂದು ತಿಳಿದುಬಂದಿದೆ.

ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News