ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ 33 ಲಕ್ಷ ರೂ. ವಂಚನೆ
Update: 2024-08-14 13:33 GMT
ಉಡುಪಿ, ಆ.14: ಹೂಡಿಕೆ ಹಣದ ಮೇಲೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಪೇಂದ್ರ(72) ಎಂಬವರನ್ನು ಅಪರಿಚಿತ ವ್ಯಕ್ತಿಗಳು ಜೂ.24ರಂದು ಗ್ರೂಪ್‌ಗೆ ಸೇರಿಸಿದ್ದು, ವಾಟ್ಸಾಪ್‌ನಲ್ಲಿ ಟ್ರೇಡಿಂಗ್ ಹಾಗೂ ಲಾಭಾಂಶಗಳ ಬಗ್ಗೆ ಮಾಹಿತಿ ತಿಳಿಸಿ ಉಪೇಂದ್ರ ಅವರನ್ನು ನಂಬಿಸಿ, ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿದ್ದರು. ಅದರಂತೆ ಉಪೇಂದ್ರ ಅಪರಿಚಿತರು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಜು.4ರಂದು ವಿವಿಧ ಹಂತ ದಲ್ಲಿ ಒಟ್ಟು 33,10,000ರೂ. ಹಣವನ್ನು ಹೂಡಿಕೆ ಮಾಡಿದ್ದರು. ಆದರೆ ಬಳಿಕ ಆರೋಪಿಗಳು ಹೂಡಿಕೆ ಮಾಡಿದ ಹಣ ಅಥವಾ ಲಾಭಾಂಶವನ್ನಾಗಲಿ ಈವರೆಗೆ ನೀಡದೇ ನಂಬಿಸಿ, ಮೋಸ ಮಾಡಿರುವುದಾಗಿ ದೂರಲಾಗಿದೆ.