ಹೆಬ್ರಿ: ಮಟ್ಕಾ ಜುಗಾರಿ; ಓರ್ವ ಪೊಲೀಸ್ ವಶಕ್ಕೆ

Update: 2024-09-27 07:18 GMT

ಹೆಬ್ರಿ, ಸೆ.27: ನಾಲ್ಕೂರು ಗ್ರಾಮದ ಚಾಕ್ಟಿಕಟ್ಟೆ ಪೇಟೆಯ ಗೂಡಂಗಡಿ ಸಮೀಪ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಓರ್ವನನ್ನು ಹೆಬ್ರಿ ಪೊಲೀಸರು ಸೆ.25ರಂದು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಯನ್ನು ಶಂಕರ(61) ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಹೆಬ್ರಿ ಎಸ್ಸೈ ಮಹೇಶ ಟಿ.ಎಂ. ಶಂಕರ್‌ನನ್ನು ವಶಕ್ಕೆ ಪಡೆದುಕೊಂಡಿದ್ದು, ಈತನಿಂದ ನಗದು 2020ರೂ. ನಗದು ವಶಪಡಿಸಿ ಕೊಳ್ಳಲಾಗಿದೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News