ಕೋಟದಲ್ಲಿ ಮತ್ಸ್ಯ ಮೇಳ ಉದ್ಘಾಟನೆ
ಕೋಟ, ಅ.28: ಜಲನಯನ ಅಭಿವೃದ್ಧಿ ಇಲಾಖೆ, ಮೀನುಗಾರಿಕ ಇಲಾಖೆ, ಸ್ಕೊಡ್ ವೆಸ್ ಸಂಸ್ಥೆ-ಶಿರಸಿ ಮತ್ತು ಉಡುಪಿ, ಕಿನಾರ ಮೀನುಗಾರರ ಉತ್ಪಾದಕ ಕಂಪನಿಯ ಜಂಟಿ ಆಶ್ರಯದಲ್ಲಿ ಮತ್ಸ್ಯ ಮೇಳವನ್ನು ಶನಿವಾರ ಕೋಟ ಲಕ್ಷ್ಮೀ ಸೋಮಬಂಗೇರ ಸಹಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಕಡಲನ್ನು ನಂಬಿಕೊಂಡು ಬದುಕು ಕಟ್ಟಿಕೊಂಡವರು ಮೊಗವೀರ ಸಮಾಜದವರು. ದೋಣಿಯ ಮೂಲಕ ಆರಂಭವಾದ ಮೀನುಗಾರಿಕಾ ಚಟುವಟಿಕೆ ಇಂದು ದೋಣಿಯ ಜೊತೆಯಲ್ಲಿ ಯಂತ್ರೋಪಕರಣಗಳ ಸಹಾಯದಿಂದ ಮುಂದುವರೆಯುತ್ತದೆ ಜೊತೆಗೆ ಅನೇಕರಿಗೆ ಉದ್ಯೋಗಾವಕಾಶ ಮಾಡಿಕೊಟ್ಟಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕೋಟ ಪಡುಕೆರೆಯ ಗೀತಾಂನದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್, ಉಡುಪಿ ಕಿನಾರ ಮೀನುಗಾರರ ಉತ್ಪಾದಕ ಕಂಪನಿ ಅಧ್ಯಕ್ಷ ಲೋಹಿತ್ ಖಾರ್ವಿ, ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ, ಕೋಟತಟ್ಟು ಗ್ರಾಪಂ ಅಧ್ಯಕ್ಷ ಸತೀಶ್ ಕುಂದರ್, ಸ್ಕೊಡ್ ವೆಸ್ ಸಂಸ್ಥೆ ಕಾರ್ಯನಿರ್ವಾಹಕರಾದ ಡಾ.ವೆಂಕಟೇಶ ಎಲ್.ನಾಯ್ಕ್, ಹನುಮಂತಪ್ಪ, ಮೀನುಗಾರಿಕಾ ಜಂಟಿ ನಿರ್ದೇಶಕ ವಿವೇಕ್ ಉಪಸ್ಥಿತರಿದ್ದರು.