ಕಾರ್ಕಳ: ನಿಟ್ಟೆ ಕ್ಯಾಂಪಸ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ

Update: 2024-08-15 15:37 GMT

ಕಾರ್ಕಳ: "ಸ್ವಾತಂತ್ರಪೂರ್ವದಲ್ಲಿ ಬ್ರಿಟೀಷರ ಆಳ್ವಿಕಯು ನಮ್ಮ ದೇಶವನ್ನು ಹಿಂದುಳಿದ ದೇಶವನ್ನಾಗಿಸಿತು. 1947 ರಿಂದ ತೊಡಗಿ ಇಂದಿನವರೆಗೆ 77 ವರ್ಷಗಳಲ್ಲಿ ದೇಶವು ಅಭಿವೃದ್ದಿ ಹೊಂದಿರುವ ಪ್ರಮಾಣವು ಗಮನಾರ್ಹ. ದೇಶವು ಆಹಾರ, ಆರೋಗ್ಯ, ತಂತ್ರಜ್ಞಾನ, ಪ್ರವಾಸೋದ್ಯಮ, ಜಿಡಿಪಿ ಬೆಳವಣಿಗೆ ಮುಂತಾದ ವಿಚಾರಗಳಲ್ಲಿ ಗಮನಾರ್ಹ ಬೆಳವಣಿಗೆ ಕಂಡಿದೆ. ವಿವಿಧ ವಸ್ತುಗಳ ತಯಾರಿಕೆ ಹಾಗೂ ರಫ್ತು ಮಾಡುವುದರಲ್ಲೂ ದೇಶವು ಮುಂಚೂಣಿಯನ್ನು ಕಾಣುತ್ತಿರುವುದು ಹೆಮ್ಮೆಯ ವಿಚಾರ. ನಮ್ಮ ಇಂದಿನ ಉತ್ತಮ ಬದುಕಿಗೆ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವೇ ಕಾರಣವೆಂಬುದನ್ನು ನಾವು ಎಂದಿಗೂ ಮರೆಯಬಾರದು. ಜಾಗತಿಕ ಮಟ್ಟದಲ್ಲಿ ಭಾರತವನ್ನು ಬಲಿಷ್ಟ ದೇಶವನ್ನಾಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕೈಜೋಡಿಸೋಣ" ಎಂದು ನಿಟ್ಟೆ ಜಸ್ಟೀಸ್ ಕೆ.ಎಸ್.ಹೆಗ್ಡೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನ ಮಾಜಿ ನಿರ್ದೇಶಕ ಪ್ರೊ.ಡಾ| ಗುರುರಾಜ್ ಕಿದಿಯೂರು ಅಭಿಪ್ರಾಯಪಟ್ಟರು.

ಅವರು ನಿಟ್ಟೆ ಕ್ಯಾಂಪಸ್‌ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ ದರು. ನಿಟ್ಟೆ ತಾಂತ್ರಿಕ ಕಾಲೇಜಿನ 6 ಕೆ.ಎ.ಆರ್ ನೇವಲ್ ಎನ್.ಸಿ.ಸಿ ಘಟಕದ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ನಡೆಸಿದರು. ಡಾ. ಎನ್.ಎಸ್.ಎ.ಎಂ ಶಾಲೆಯ ಸ್ಕೌಟ್-ಗೈಡ್ಸ್, ಎನ್.ಸಿ.ಸಿ ಕೆಡೆಟ್ ಗಳು, ಕಾಲೇಜಿನ ಸುರಕ್ಷತಾ ಸಿಬ್ಬಂದಿ ವರ್ಗ, ಪ್ರಾಧ್ಯಾಪಕರು, ಬೊಧಕೇತರ ವರ್ಗ, ವಿದ್ಯಾರ್ಥಿಗಳು, ಭಾಗವಹಿಸಿದ್ದರು. ಡಾ.ಎನ್.ಎಸ್.ಎ.ಎಂ ಶಾಲಾ ವಿದ್ಯಾರ್ಥಿಗಳಿಂದ ದೇಶಭಕ್ತಿಗೀತೆ ಗಾಯನ ನಡೆಯಿತು.

ವೇದಿಕೆಯಲ್ಲಿ ನಿಟ್ಟೆ ಸಮೂಹ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರು, ನಿರ್ದೇಶಕರು, ಉಪಪ್ರಾಂಶುಪಾಲರು, ವಿವಿಧ ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು.

ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ನಿರಂಜನ್ ಎನ್ ಚಿಪ್ಳೂಣ್ಕರ್ ಸ್ವಾಗತಿಸಿದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ರಾಘವೇಂದ್ರ ಬಾಯರಿ ವಂದಿಸಿದರು. ನಿಟ್ಟೆ ಶಾಲೆಯ ಎನ್.ಸಿ.ಸಿ ಘಟಕದ ಉಸ್ತುವಾರಿ ಅಧಿಕಾರಿ ಉಷಾ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News