ಕುಂದಾಪುರ: MIEF ವತಿಯಿಂದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಗಾರ

Update: 2023-12-26 05:36 GMT

ಕುಂದಾಪುರ: ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ(MIEF)ದ ವತಿಯಿಂದ ಎಸ್. ಎಸ್ . ಎಲ್.ಸಿ ವಿದ್ಯಾರ್ಥಿಗಳ ತರಬೇತಿ ಕಾರ್ಯಗಾರವು ಕೋಡಿಯ ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ ನಲ್ಲಿ ಸೋಮವಾರ ನಡೆಯಿತು.

ಉಡುಪಿ ಝೋನಿನ ಕುಂದಾಪುರ ವಲಯದ ರಾಮ್ಸನ್ ಸ್ಕೂಲ್ ಕಂಡ್ಲೂರ್, ಸೈಂಟ್ ಜೋಸೆಫ್ ಹೈ ಸ್ಕೂಲ್ ಕುಂದಾಪುರ, ಸೈಂಟ್ ಮೇರೀಸ್ ಸ್ಕೂಲ್ ಕುಂದಾಪುರ, ಸರಕಾರಿ ಪ್ರೌಢ ಶಾಲೆ ಬಸ್ರೂರು, ಎಸ್.ಎಲ್.ಬಿ.ಎಂ.ಆರ್. ಕೆ. ಎಚ್. ಸರಕಾರಿ ಪ್ರೌಢ ಶಾಲೆ ಬೀಜಾಡಿ, ಹಾಜಿ ಕೆ. ಮೊಹಿದ್ದೀನ್ ಸ್ಮಾರಕ ಅನುದಾನಿತ ಪ್ರೌಢ ಶಾಲೆ ಕೋಡಿ, ಝಿಯಾ ಪಬ್ಲಿಕ್ ಸ್ಕೂಲ್ ಕಂಡ್ಲೂರು, ತೌಹೀದ್ ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ, ಅಂಜುಮಾನ್ ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ , ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ ಕೋಡಿ ವಿದ್ಯಾ ಸಂಸ್ಥೆಗಳ 375 ವಿದ್ಯಾರ್ಥಿಗಳು ಈ ಕಾರ್ಯಗಾರದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಉಪನ್ಯಾಸಕ ಉಡುಪಿ ಡಯಟ್ ಅಧಿಕಾರಿ ಡಾII.ಅಶೋಕ್ ಕಾಮತ್ ಅವರು, ಮಾಡುವ ಕೆಲಸವನ್ನು ಮೊದಲ ಬಾರಿಗೆ ಚೆನ್ನಾಗಿ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಅತಿಥಿಗಳಾಗಿ ಆಗಮಿಸಿದ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಟ್ರಸ್ಟಿಗಳಾದ ಅಬೂಬಕರ್ ಸಿದ್ದಿಕ್ ಬ್ಯಾರಿ, ಡಾ. ಆಸಿಫ್ ಬ್ಯಾರಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಮೀಫ್ ಅಧ್ಯಕ್ಷ ಮೂಸಬ್ಬ .ಪಿ.ಬ್ಯಾರಿ ಜೋಕಟ್ಟೆ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ರಾಷ್ಟ್ರೀಯ ತರಬೇತಿದಾರರಾದ ಪ್ರೊ. ರಾಜೇಂದ್ರ ಭಟ್ ಅವರು, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಿ ಪರೀಕ್ಷೆ ಎದುರಿಸುವ ವಿಧಿ ವಿಧಾನಗಳು ಹಾಗೂ ವಿಶೇಷವಾಗಿ ಗಣಿತ ಹಾಗೂ ವಿಜ್ಞಾನ ವಿಷಯದಲ್ಲಿ ಸರಳ ಕಲಿಕಾ ಕಲೆಗಳ ಬಗ್ಗೆ ಕಾರ್ಯಗಾರ ನಡೆಸಿದರು.

ಮೀಫ್ ಉಡುಪಿ ಝೋನಿನ ಉಪಾಧ್ಯಕ್ಷ  ಶಬೀಹ್ ಅಹಮ್ಮದ್ ಕಾಜೀ , ಮೀಫ್ ಕಾರ್ಯದರ್ಶಿ ಹಾಗೂ ಕಾರ್ಯಕ್ರಮದ ಸಂಚಾಲಕ ಅನ್ವರ್ ಹುಸೇನ್ ಗೂಡಿನಬಳಿ, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಎಲ್ಲಾ ವಿಭಾಗದ ಮುಖ್ಯಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು.

ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ  ಬ್ಯಾರಿಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲೆ ಅಶ್ವಿನಿ ಶೆಟ್ಟಿ ಅವರು ಸ್ವಾಗತಿಸಿದರು. ಸಹ ಶಿಕ್ಷಕಿ ಜೆನ್ನಿಫರ್ ಲೂಯಿಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಅಫ್ ಶೀನ್ ತಾಜ್ ರವರು ವಂದಿಸಿದರು.  

 215 ಸರಕಾರಿ ಶಾಲೆಯ ವಿದ್ಯಾರ್ಥಿಗಳು ಹಾಗೂ 160 ಅಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸುವುದರ ಮೂಲಕ ಸಭೆಗೆ ವಿಶೇಷ ಮೆರುಗನ್ನು ತಂದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News