ಮಡಗಾಂವ್ ಜಂಕ್ಷನ್-ಕುಮಟ ನಡುವೆ ನಿರ್ವಹಣಾ ಕೆಲಸ: ರೈಲು ಸಂಚಾರ ವ್ಯತ್ಯಯ

Update: 2023-07-31 15:44 GMT

ಸಾಂದರ್ಭಿಕ ಚಿತ್ರ

ಉಡುಪಿ, ಜು.31:  ಆಗಸ್ಟ್ 3ರಂದು ಗುರುವಾರ ಬೆಳಗ್ಗೆ 11:00ರಿಂದ ಅಪರಾಹ್ನ 3:00 ಗಂಟೆಗಳ ಮಧ್ಯೆ 4ಗಂಟೆಗಳ ಕಾಲ ಕೊಂಕಣ ರೈಲು ಮಾರ್ಗದ ಮಡಗಾಂವ್ ಜಂಕ್ಷನ್ ಹಾಗೂ ಕುಮಟ ನಿಲ್ದಾಣಗಳ ನಡುವೆ ನಿರ್ವಹಣಾ ಕೆಲಸ ನಡೆಯಲಿರುವುದರಿಂದ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೊಂಕಣ ರೈಲ್ವೇ ಪ್ರಕಟಣೆ ತಿಳಿಸಿದೆ.

ಇದರಿಂದ ರೈಲು ನಂ.06602 ಮಂಗಳೂರು ಸೆಂಟ್ರಲ್-ಮಡಗಾಂವ್ ಜಂಕ್ಷನ್ ನಡುವೆ ಆ.3ರಂದು ಸಂಚರಿಸುವ ವಿಶೇಷ ರೈಲು ಮಂಗಳೂರಿನಿಂದ ಕುಮಟದವರೆಗೆ ಮಾತ್ರ ಸಂಚರಿಸಲಿದೆ. ಹೀಗಾಗಿ ಕುಮಟ-ಮಡಗಾಂವ್ ನಡುವಿನ ಅದರ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಇದರೊಂದಿಗೆ ಅದೇ ದಿನ ಸಂಚರಿಸುವ ರೈಲು ನಂ.06601 ಮಡಗಾಂವ್ ಜಂಕ್ಷನ್- ಮಂಗಳೂರು ಸೆಂಟ್ರಲ್ ವಿಶೇಷ ರೈಲಿನ ಪ್ರಯಾಣ ಕುಮಟ ನಿಲ್ದಾಣದಿಂದ ಪ್ರಾರಂಭಗೊಳ್ಳಲಿದೆ. ಹೀಗಾಗಿ ಅದರ ಮಡಗಾಂವ್ ಜಂಕ್ಷನ್ ಹಾಗೂ ಕುಮಟ ನಡುವಿನ ಸಂಚಾರವನ್ನು ರದ್ದುಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News