ಮಡಗಾಂವ್- ಕುಮಟ ನಡುವೆ ನಿರ್ವಹಣೆ ಕಾರ್ಯ; ಕೆಲ ರೈಲು ಸಂಚಾರದಲ್ಲಿ ವ್ಯತ್ಯಯ

Update: 2023-10-24 13:55 GMT

ಸಾಂದರ್ಭಿಕ ಚಿತ್ರ

ಉಡುಪಿ, ಅ.24: ಕೊಂಕಣ ರೈಲು ಮಾರ್ಗದ ಚಿಪ್ಳುಣ್- ಸಂಗಮೇಶ್ವರ ರೋಡ್ ಹಾಗೂ ಮಡಗಾಂವ್ ಜಂಕ್ಷನ್ ಮತ್ತು ಕುಮಟಾ ನಿಲ್ದಾಣಗಳ ನಡುವೆ ಅ.26ರ ಗುರುವಾರ ನಿರ್ವಹಣಾ ಕಾಮಗಾರಿ ನಡೆಯಲಿರುವುದ ರಿಂದ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಮಡಗಾಂವ್ ಜಂಕ್ಷನ್-ಕುಮಟಾ ನಡುವೆ ಬೆಳಗ್ಗೆ 11:00ರಿಂದ ಅಪರಾಹ್ನ 2:00ಗಂಟೆಯವರೆಗೆ ಮೂರು ಗಂಟೆಗಳ ಕಾಲ ಕಾಮಗಾರಿ ನಡೆಯಲಿದ್ದು, ಈ ಸಂದರ್ಭದಲ್ಲಿ ರೈಲು ನಂ.06602 ಮಂಗಳೂರು ಸೆಂಟ್ರಲ್ ಹಾಗೂ ಮಡಗಾಂವ್ ಜಂಕ್ಷನ್ ನಡುವಿನ ವಿಶೇಷ ರೈಲಿನ ಪ್ರಯಾಣ ಕುಮಟಾ ನಿಲ್ದಾಣದಲ್ಲೇ ಕೊನೆಗೊಳ್ಳಲಿದೆ ಇದರಿಂದ ಕುಮಟಾ ಹಾಗೂ ಮಡಗಾಂವ್ ಜಂಕ್ಷನ್ ನಡುವಿನ ಪ್ರಯಾಣ ರದ್ದುಗೊಳ್ಳಲಿದೆ.

ಅದೇ ರೀತಿ ಅ.26ರ ರೈಲು ನಂ.06601 ಮಡಗಾಂವ್ ಜಂಕ್ಷನ್- ಮಂಗಳೂರು ಸೆಂಟ್ರಲ್ ರೈಲಿನ ಪ್ರಯಾಣ ಕುಮಟಾ ನಿಲ್ದಾಣದಿಂದ ನಿಗದಿತ ಸಮಯಕ್ಕೆ ಪ್ರಾರಂಭಗೊಳ್ಳಲಿದೆ.ಹೀಗಾಗಿ ಮಡಗಾಂವ್ ಜಂಕ್ಷನ್ ಹಾಗೂ ಕುಮಟಾ ನಡುವಿನ ಅಂದಿನ ಪ್ರಯಾಣ ಇರುವುದಿಲ್ಲ.

ಇನ್ನು ಚಿಪ್ಳುಣ್ ಹಾಗೂ ಸಂಗಮೇಶ್ವರ ರೋಡ್ ನಡುವೆ ಅ.26ರಂದು ಬೆಳಗ್ಗೆ 7:30ರಿಂದ 10:30 ನಡುವೆ ನಿರ್ವಹಣಾ ಕಾರ್ಯ ನಡೆಯಲಿದ್ದು, ಇದರಿಂದ ಅ.25ರಂದು ಹೊರಡುವ ತಿರುವನಂತಪುರ ಸೆಂಟ್ರಲ್- ಲೋಕಮಾನ್ಯ ತಿಲಕ್ ನಡು ವಿನ ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣ ರತ್ನಗಿರಿ ಹಾಗೂ ಸಂಗಮೇಶ್ವರ ರೋಡ್ ನಡುವೆ 40 ನಿಮಿಷ ವಿಳಂಬ ಗೊಳ್ಳಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News