ಮಣಿಪಾಲ: ಬ್ಯಾಂಕ್ ಖಾತೆಯಿಂದ ಹಣ ವಂಚನೆ
Update: 2023-09-14 14:55 GMT
ಮಣಿಪಾಲ, ಸೆ.14: ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂ. ಹಣ ವರ್ಗಾವಣೆ ಮಾಡಿ ಮೋಸ ಮಾಡಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಜಾಕಬ್ ಜಾಜ್ ಎಂಬವರ ಬ್ಯಾಂಕ್ ಖಾತೆಯಿಂದ ಸೆ.13ರಂದು ಬೆಳಗ್ಗೆ ಒಟ್ಟು 1,60,263ರೂ. ಹಣವನ್ನು ಕಳ್ಳರು ಅವರ ಗಮನಕ್ಕೆ ಬಾರದೇ ಯುಪಿಐ ಮೂಲಕ ವರ್ಗಾವಣೆ ಮಾಡಿ ಮೋಸ ಮಾಡಿರುವುದಾಗಿ ದೂರಲಾಗಿದೆ.