ಮಣಿಪಾಲ: ಬಿವಿಟಿಯಿಂದ ಮಹಿಳೆಯರಿಗೆ ವಿವಿಧ ತರಬೇತಿ

Update: 2023-10-07 13:29 GMT

ಉಡುಪಿ, ಅ.7: ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ಪ್ರಾದೇಶಿಕ ಕಛೇರಿ ಉಡುಪಿ ಇವರ ಪ್ರಾಯೋಜಕತ್ವದಲ್ಲಿ ಉಡುಪಿ ಜಿಲ್ಲೆಯ ಆಸಕ್ತ ಮಹಿಳೆಯರಿಗೆ ಒಂದು ವಾರದ ವಿವಿಧ ರೀತಿಯ ಬ್ರೈಡಲ್ ಹೇರ್, ಸಾರಿ ಸ್ಟೈಲ್ ಹಾಗೂ ಮೆಹೆಂದಿ ತರಬೇತಿಯು ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಸೀನಿಯರ್ ಮ್ಯಾನೇಜರ್ ಸುನೀತಾ ಅವರಿಂದ ಶನಿವಾರ ಉದ್ಘಾಟನೆಗೊಂಡಿತು.

ಈ ಸಂದರ್ಭದಲ್ಲಿ ಮಾತನಾಡಿದ ಸುನೀತಾ ಅವರು, ಇಲ್ಲಿ ತರಬೇತಿ ಪಡೆಯುತ್ತಿರುವ ಮಹಿಳೆಯರು ತಾವು ಕಲಿತ ವಿದ್ಯೆಯನ್ನು ಇಲ್ಲಿಗೆ ಬಿಡದೆ, ಅದನ್ನು ಸ್ವಂತ ಉದ್ಯೋಗವನ್ನಾಗಿ ಮುಂದುವರಿಸಿಕೊಂಡು ಹೋಗಿ ಆರ್ಥಿಕವಾಗಿ ಸಬಲ ರಾಗುವಂತೆ ಸಲಹೆ ನೀಡಿದರು. ಇದಕ್ಕಾಗಿ ಅದಕ್ಕಾಗಿ ಬ್ಯಾಂಕಿ ಅಗತ್ಯ ಸೌಲಭ್ಯ ಪಡಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.

ಮತ್ತೊಬ್ಬ ಮುಖ್ಯ ಅತಿಥಿ ಲಯನ್ಸ್ ಕ್ಲಬ್‌ನ ಜಿಲ್ಲಾ ಉಪಾಧ್ಯಕ್ಷೆ ಸ್ವಪ್ನಾ ಸುರೇಶ್ ಮಾತನಾಡಿ ಮಹಿಳೆಯರು ಸಮುದಾಯ ದಲ್ಲಿ ಕಲಿಯಲು ಏನೆಲ್ಲಾ ಅವಕಾಶವಿರುತ್ತದೋ ಅದರ ಸದುಪಯೋಗವನ್ನು ಮಾಡಿಕೊಂಡಲ್ಲಿ ಒಂದಲ್ಲ ಒಂದು ಸಮಯ ದಲ್ಲಿ ಉಪಯೋಗಕ್ಕೆ ಬರುತ್ತದೆ. ಮಹಿಳೆಯರು ಅದಷ್ಟು ಹೆಚ್ಚು ಸ್ವಾವಲಂಬಿಗಳಾಗುವಂತೆ ಕಿವಿಮಾತು ಹೇಳಿದರು.

ಲಯನ್ಸ್ ಕ್ಲಬ್‌ನ ಸರಿತಾ ಸಂತೋಷ ಹಾಗೂ ಸಂಪನ್ಮೂಲ ವ್ಯಕ್ತಿ ವಿನ್ನಿ ಸಂತೋಷ ಉಪಸ್ಥಿತರಿದ್ದರು. ಬಿವಿಟಿಯ ಕಾರ್ಯ ಕ್ರಮ ಸಂಯೋಜಕಿ ಲಕ್ಷ್ಮೀಬಾಯಿ ಸ್ವಾಗತಿಸಿ ಪ್ರಸ್ತಾವಿಕಮಾತುಗಳನ್ನಾಡಿದರೆ, ಕ್ಷಮಾ ವಂದಿಸಿದರು. ಪ್ರತಿಮಾ ಕಾರ್ಯ ಕ್ರಮ ನಿರೂಪಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News