ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ: ದ.ಕನ್ನಡ ವಾಲಿಬಾಲ್, ಕಬಡ್ಡಿ, ಖೋಖೋ ಚಾಂಪಿಯನ್

Update: 2023-10-02 14:33 GMT

ಉಡುಪಿ, ಅ.2: ಉಡುಪಿಯಲ್ಲಿ ಇಂದು ಮುಕ್ತಾಯಗೊಂಡ 2023-24ನೇ ಸಾಲಿನ ಮೈಸೂರು ವಿಭಾಗದ ಮಟ್ಟದ ದಸರಾ ಕ್ರೀಡಾಕೂಟದ ಪುರುಷರ ವಿಭಾಗದ ವಾಲಿಬಾಲ್, ಕಬಡ್ಡಿ, ಖೋಖೋ ಸ್ಪರ್ಧೆಗಳಲ್ಲಿ ಹಾಗೂ ಮಹಿಳೆಯರ ವಿಭಾಗದ ಕಬಡ್ಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ತಂಡ ಅಗ್ರಸ್ಥಾನಿಯಾಗಿ ಹೊರಹೊಮ್ಮಿದೆ.ಈಜು ಸ್ಪರ್ಧೆಗಳಲ್ಲೂ ದಕ್ಷಿಣ ಕನ್ನಡದ ಈಜುಪಟುಗಳೇ ಸಂಪೂರ್ಣ ಮೇಲುಗೈ ಸಾಧಿಸಿದರು.

ನಗರದ ಅಜ್ಜರಕಾಡಿನಲ್ಲಿ ಎರಡು ದಿನಗಳ ಕಾಲ ನಡೆದ ವಿವಿಧ ಗುಂಪು ಸ್ಪರ್ಧೆಗಳಲ್ಲಿ ದಕ್ಷಿಣ ಕನ್ನಡ ಮೇಲುಗೈ ಸಾಧಿ ಸಿತು. ಪುರುಷರ ವಾಲಿಬಾಲ್‌ನಲ್ಲಿ ದಕ್ಷಿಣ ಕನ್ನಡ ಅಗ್ರಸ್ಥಾನಿಯಾದರೆ, ಆತಿಥೇಯ ಉಡುಪಿ ಎರಡನೇ ಸ್ಥಾನಿಯಾಯಿತು. ಮಹಿಳೆಯರ ವಿಭಾಗದಲ್ಲಿ ಮೈಸೂರು ಜಿಲ್ಲೆ ಪ್ರಥಮ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ರನ್ನರ್ ಅಪ್ ಸ್ಥಾನಿಯಾಯಿತು. ಉಳಿದ ಸ್ಪರ್ಧೆಗಳ ವಿವರ ಹೀಗಿದೆ.

ಪುರುಷರ ಕಬಡ್ಡಿ: 1.ದಕ್ಷಿಣ ಕನ್ನಡ, 2.ಉಡುಪಿ ಜಿಲ್ಲೆ, ಮಹಿಳೆಯರ ಕಬಡ್ಡಿ:1. ದಕ್ಷಿಣ ಕನ್ನಡ, 2.ಉಡುಪಿ ಜಿಲ್ಲೆ. ಪುರುಷರ ಖೋಖೋ: 1. ದಕ್ಷಿಣ ಕನ್ನಡ ಜಿಲ್ಲೆ, 2. ಮಂಡ್ಯ ಜಿಲ್ಲೆ, ಮಹಿಳೆಯರ ಖೋಖೋ: 1. ಮೈಸೂರು ಜಿಲ್ಲೆ, 2.ಮಂಡ್ಯ ಜಿಲ್ಲೆ. ಪುರುಷರ ಫುಟ್‌ಬಾಲ್: 1.ಮಂಡ್ಯ ಜಿಲ್ಲೆ, 2.ಮೈಸೂರು ಜಿಲ್ಲೆ.

ಈ ಎಲ್ಲಾ ತಂಡಗಳು ಮೈಸೂರಿನಲ್ಲಿ ನಡೆಯುವ ರಾಜ್ಯಮಟ್ಟದ ದಸರಾ ಕ್ರೀಡಾಕೂಟದಲ್ಲಿ ಸ್ಪರ್ಧಿಸುವ ಅರ್ಹತೆ ಪಡೆದುಕೊಂಡಿವೆ.

ಈಜು ಸ್ಪರ್ಧೆಯ ಫಲಿತಾಂಶ: ಪುರುಷರ ವಿಭಾಗ

100ಮೀ. ಫ್ರಿಸ್ಟೈಲ್: 1.ಚಿಂತನ್ ಶೆಟ್ಟಿ ದ.ಕ., 2.ನಿಶಾಂತ್ ಭಟ್ ದ.ಕ., 3.ಪ್ರಣವ್ ಭಾರತಿ ಮೈಸೂರು. 200ಮೀ. ಫ್ರಿಸ್ಟೈಲ್: 1.ಚಿಂತನ್ ಶೆಟ್ಟಿ ದ.ಕ., 2.ಬಷಿತ್ ದಕ, 3.ಪ್ರಣವ್ ಭಾರತಿ ಮೈಸೂರು. 400ಮೀ. ಫ್ರಿಸ್ಟ್ರೈಲ್: 1.ಸಾತ್ವಿಕ್ ನಾಯಕ್ ಸುಜಿರ್ ದಕ, 2.ಚಿಂತನ್ ಶೆಟ್ಟಿ ದಕ, 3.ಸುಬ್ರಹ್ಮಣ್ಯ ಜೀವಾಂಶ್ ಮೈಸೂರು.

100ಮೀ. ಬ್ರೆಸ್ಟ್‌ಸ್ಟ್ರೋಕ್: 1.ಪ್ರಣವ್ ಭಾರತಿ ಮೈಸೂರು, 2.ಮೊಹಮ್ಮದ್ ಅಬ್ದುಲ್ ಬಷೀತ್ ದಕ, 3. ಉದಯ್ ಎಂಎಲ್ ಮಂಡ್ಯ. 200ಮೀ. ಬ್ರೆಸ್ಟ್‌ಸ್ಟ್ರೋಕ್: 1.ಪ್ರಣವ್ ಭಾರತಿ ಮೈಸೂರು, 2.ಸ್ಟೀವ್ ಜೆಫ್ ಲೋಬೊ ದಕ, 3.ಬಷಿತ್ ದಕ. 100ಮೀ. ಬ್ಯಾಕ್‌ಸ್ಟ್ರೋಕ್: 1.ಸಾತ್ವಿಕ್ ನಾಯಕ್ ಸುಜಿರ್ ದಕ, 2.ವಫೀ ಅಬ್ದುಲ್ ಹಕೀಂ ದಕ, 3.ಜಯಕೀರ್ತಿ ಆರ್.ಶೆಟ್ಟಿ ಹಾಸನ.

200ಮೀ. ಬ್ಯಾಕ್‌ಸ್ಟ್ರೋಕ್: 1.ಸಾತ್ವಿಕ್ ನಾಯಕ್ ಸುಜಿರ್ ದಕ, 2.ವಫೀ ಅಬ್ದುಲ್ ಹಕೀಂ ದಕ, 3.ನಾ.ಯಶವಂತ್ ಮೈಸೂರು. 100ಮೀ. ಬಟರ್‌ಪ್ಲೈ: 1.ಚಿಂತನ್ ಎಸ್.ಶೆಟ್ಟಿ ದಕ, 2.ಸ್ಟೀವ್ ಜೆಫ್ ಲೋಬೊ ದಕ, 3,ಉದಯ್ ಎಂ.ಎಲ್ ಮಂಡ್ಯ. 200ಮೀ ವೈಯಕ್ತಿಕ ಮೆಡ್ಲೆ: 1.ಸಾತ್ವಿಕ್ ನಾಯಕ ಸುಜಿರ್ ದಕ, 2.ಸ್ಟೀವ್ ಜೆಫ್ ಲೋಬೊ ದಕ, 3.ಸುಬ್ರಹ್ಮಣ್ಯ ಜೀವಾಂಶ್ ಮೈಸೂರು. 100ಮೀ.ಫ್ರಿಸ್ಟೈಲ್ ರಿಲೇ: 1.ದಕ, 2.ಮೈಸೂರು, 3.ಮಂಡ್ಯ.

ಮಹಿಳೆಯರ ವಿಭಾಗ:

100ಮೀ.ಫ್ರಿಸ್ಟೈಲ್: 1.ರಚನಾ ಎಸ್‌ಆರ್ ರಾವ್ ದಕ, 2.ವರ್ಷ ಪಿ. ಶ್ರೀಯಾನ್ ದಕ, 3. ಮಾನಸ ಉಡುಪ ಮೈಸೂರು. 200ಮೀ ಫ್ರಿಸ್ಟೈಲ್: 1.ರಚನಾ ಎಸ್‌ಆರ್ ರಾವ್ ದಕ, 2.ವರ್ಷ ಶ್ರೀಯಾನ್ ದಕ, 3.ಮಾನಸ ಉಡುಪ ಮೈಸೂರು. 400ಮೀ. ಫ್ರಿಸ್ಟ್ರೈಲ್: 1.ರಚನಾ ಎಸ್‌ಆರ್ ರಾವ್ ದಕ, 2.ವರ್ಷಾ ಪಿ.ಶ್ರೀಯಾನ್ ದಕ, 3.ಚಾರ್ವಿಕಾ ಗೌಡ ಹಾಸನ.

100ಮೀ. ಬ್ರೆಸ್ಟ್‌ಸ್ಟ್ರೋಕ್:1.ಪ್ರತೀಕ್ಷಾ ಎನ್.ಶೆಣೈ ದಕ, 2.ವರ್ಷಾ ಪಿ. ಶ್ರೀಯಾನ್ ದಕ, 3.ಮಾನಸ ಉಡುಪ ಮೈಸೂರು. 200ಮೀ. ಬ್ರೆಸ್ಟ್ ಸ್ಟ್ರೋಕ್: 1.ಪ್ರತೀಕ್ಷಾ ಎನ್.ಶೆಣೈ ದಕ, 2.ಶಿಕಾ ವಿ.ಶೆಟ್ಟಿ ದಕ, 3.ಪ್ರಿಷಾ ಆರ್.ಶೆಟ್ಟಿ ಉಡುಪಿ. 100ಮೀ. ಬ್ಯಾಕ್ ಸ್ಟ್ರೋಕ್: 1.ಪ್ರಾದಿ ಕ್ಲೇರ್ ಪಿಂಟೋ ದಕ, 2.ಪೂರ್ವಿ ಎನ್ ದಕ, 3.ಚಾರ್ವಿಕಾ ಗೌಡ ಹಾಸನ.

200ಮೀ. ಬ್ಯಾಕ್‌ಸ್ಟ್ರೋಕ್: 1.ಪೂರ್ವಿ ಎಂ ದಕ, 2.ಪ್ರಾದಿ ಕ್ಲೇರ್ ಪಿಂಟೊ ದಕ, 3.ಮೊನಿಷಾ ಎಚ್‌ಎಂ ಹಾಸನ. 100ಮೀ ಬಟರ್‌ಪ್ಲೈ: 1.ಶ್ವಿತಿ ಡಿ.ಎಸ್. ದಕ, 2.ಮಾನಸ ಉಡುಪ ಮೈಸೂರು, 3.ಮೊನಿಷಾ ಎಚ್.ಎಂ. ಹಾಸನ. 200ಮೀ. ವೈಯಕ್ತಿಕ ಮೆಡ್ಲೆ: 1.ರಚನಾ ಎಸ್‌ಆರ್ ರಾವ್ ದಕ, 2.ಪೂರ್ವಿ ದಕ, 3.ಮಾನಸ ಉಡುಪ ಮೈಸೂರು. 100ಮೀ. ಫ್ರಿಸ್ಟೈಲ್ ರಿಲೇ: 1.ದಕ, 2.ಹಾಸನ, 3.ಉಡುಪಿ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News