ಗಾಂಜಾ ಸೇವನೆ: ಮೂವರು ವಶಕ್ಕೆ
Update: 2023-10-05 16:11 GMT
ಮಣಿಪಾಲ, ಅ.5: ಗಾಂಜಾ ಸೇವನೆಗೆ ಸಂಬಂಧಿಸಿ ಮೂರು ಆರೋಪಿಗಳನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿದ್ಯಾರತ್ನ ನಗರದ ಪೋಲಾರ್ ಬೇರ್ ರಸ್ತೆಯ ಬಳಿ ಗೋಕುಲ ಡಿ.ಎಸ್. (19), ಸೆ.29ರಂದು ಮಣಿಪಾಲದ ಎಂಐಟಿ ಪಾರ್ಕಿಂಗ್ ಬಳಿ ನಿತೀಶ್ ಕುಮಾರ್ (19) ಮತ್ತು ಎಂ.ತೇಜಸ್(20) ಎಂಬವರನ್ನು ವಶಕ್ಕೆ ಪಡೆದು ಮಣಿಪಾಲ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರು ಪಡಿಸಿದ್ದು ಅ.4ರಂದು ಬಂದ ವರದಿಯಲ್ಲಿ ಆರೋಪಿಗಳು ಗಾಂಜಾ ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.