ವಿಕಲಚೇತನರು, ಹಿರಿಯ ನಾಗರಿಕರಿಗೆ ಅಗತ್ಯ ಸಾಧನ ಸಲಕರಣೆಗಳ ವಿತರಣೆಗೆ ತಪಾಸಣಾ ಶಿಬಿರ

Update: 2024-07-06 15:22 GMT

ಉಡುಪಿ, ಜು.6: ಕೇಂದ್ರ ಸರಕಾರದ ಸಾಮಾಜಿಕ ನಯಾಯ ಮತ್ತು ಸಬಲೀಕರಣ ಮಂತ್ರಾಲಯದ ಅಡಿಯಲ್ಲಿ ಕೃತಕ ಅಂಗಾಂಗ ತಯಾರಿಕಾ ಕಾರ್ಪೊರೇಷನ್ ಆಫ್ ಇಂಡಿಯಾ (ಅಲಿಂಕೋ), ಉಡುಪಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿ ಕರ ಸಬಲೀಕರಣ ಇಲಾಖೆ, ಜಿಲ್ಲಾ ರೆಡ್‌ಕ್ರಾಸ್ ಘಟಕದ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರಗಳ ಸಹಯೋಗ ದೊಂದಿಗೆ ಎಡಿಐಪಿ ಮತ್ತು ಆರ್‌ವಿವೈ ಯೋಜನೆಯಡಿಯಲ್ಲಿ ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಅಗತ್ಯ ಸಾಧನ ಸಲಕರಣೆಗಳ ವಿತರಣೆಗಾಗಿ ತಪಾಸಣಾ ಶಿಬಿರ ಜುಲೈ 10 ರಿಂದ 18ರವರೆಗೆ ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ನಡೆಯಲಿದೆ ಎಂದು ಜಿಲ್ಲಾ ರೆಡ್‌ಕ್ರಾಸ್ ಘಟಕದ ಉಪಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ತಿಳಿಸಿದ್ದಾರೆ.

ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ತಪಾಸಣಾ ಶಿಬಿರಗಳು ಜು.10 ರಂದು ಉಡುಪಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ, 11ರಂದು ಬೈಂದೂರಿನ ಅಂಬೇಡ್ಕರ್ ಭವನದಲ್ಲಿ, 12ರಂದು ಕಾಪುವಿನ ಜೆ.ಸಿ.ಭವನದಲ್ಲಿ, 14ರಂದು ಬ್ರಹ್ಮಾವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, 15ರಂದು ಕುಂದಾಪುರದ ಜೂನಿಯರ ಕಾಲೇಜು ಆವರಣದಲ್ಲಿ, 16ರಂದು ಹೆಬ್ರಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಾಗೂ ಜು.18ರಂದು ಕಾರ್ಕಳ ತಾಲೂಕು ಆಸ್ಪತ್ರೆಯಲ್ಲಿ ಬೆಳಗ್ಗೆ 9:30ರಿಂದ ಸಂಜೆ 4:30ರವರೆಗೆ ನಡೆಯಲಿವೆ ಎಂದರು.

ಅಡಿಪ್ ಯೋಜನೆಯಡಿ ವಿಕಲಚೇತನರು ಉಚಿತ ಸಾಧನ ಸಲಕರಣೆಯ ಲಾಭವನ್ನು ಪಡೆಯಲು ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ, ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್ ಅಥವಾ ವಾರ್ಷಿಕ ಆದಾಯ 2,70,000ರೂ. ಮೀರದಿರುವ ಆದಾಯ ಪ್ರಮಾಣ ಪತ್ರ, ಪಾಸ್‌ಪೋರ್ಟ್ ಅಳತೆಯ ಪೋಟೋವನ್ನು ಶಿಬಿರಕ್ಕೆ ಬರುವಾಗ ತರಬೇಕು.

ರಾಷ್ಟೀಯ ವಯೋಶ್ರೀ ಯೋಜನೆಯಡಿ ಹಿರಿಯ ನಾಗರಿಕರು ಸಾಧನ ಸಲಕರಣೆ ಪಡೆಯಲು ಹಿರಿಯ ನಾಗರಿಕರ ಗುರು ತಿನ ಚೀಟಿ ಅಥವಾ ವಯೋಮಿತಿ ಸೂಚಿಸುವ ದಾಖಲಾತಿ, ಆಧಾರ ಕಾರ್ಡ್, ಬಿಪಿಎಲ್ ಕಾರ್ಡ್ ಅಥವಾ ವಾರ್ಷಿಕ ಆದಾಯ 2,70,000ರೂ. ಮೀರದಿರುವ ಆದಾಯ ಪ್ರಮಾಣ ಪತ್ರ, ಪಾಸ್‌ಪೋರ್ಟ್ ಸೈಜ್ ಪೋಟೋವನ್ನು ಸಲ್ಲಿಸಬೇಕು.

ವಿಕಲಚೇತನರಿಗೆ ಗಾಲಿ ಕುರ್ಚಿ, ಟ್ರೈಸೈಕಲ್, ಊರುಗೋಲು, ಕಂಕುಳ ದೊಣ್ಣೆ, ರೊಲೆಟರ್ಸ್‌, ಕುತ್ತಿಗೆ ಕಾಲರ್, ಮೋಟರೀಕೃತ ಟ್ರೈಸೈಕಲ್, ಕೃತಕ ಅಂಗಗಳು, ಕ್ಯಾಲಿಪರ್ಸ್ ಮುಂತಾದ ಸಲಕರಣೆಗಳಿದ್ದರೆ, ಹಿರಿಯ ನಾಗರಿಕರಿಗೆ ಊರುಗೋಲು, ಸೀಟ್ ಇರುವ ಊರುಗೋಲು, ಬೆನ್ನಿಗೆ ಸರ್ಪೋಟ್ ಬೆಲ್ಟ್, ವಾಕರ್, ಗಾಲಿಕುರ್ಚಿ, ಲೊರೇಟರ್ ಇತ್ಯಾದಿ ಸಲಕರಣೆಗಳು ಲಭ್ಯವಿರುತ್ತವೆ.

ಹೆಚ್ಚಿನ ಮಾಹಿತಿಗಾಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮಣಿಪಾಲ ದೂ.ಸಂಖ್ಯೆ:0820-2574810, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಅಜ್ಜರಕಾಡು, ಉಡುಪಿ ದೂ.ಸಂಖ್ಯೆ: 0820-2533372, ಮೊ.ನಂ: 9449334270, ಕುಂದಾಪುರ ಮೊ.ನಂ:9901824878 ಮತ್ತು ಕಾರ್ಕಳ ಮೊ.ನಂ:9741235518ನ್ನು ಸಂಪರ್ಕಿಸಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ಯಾಮಲ ಸಿ.ಕೆ., ವಿಕಲಚೇತನರ ಹಾಗೂ ಹಿರಿಯ ನಾಗರಿಕ ಇಲಾಖೆಯ ಯೋಜನಾಧಿಕಾರಿ ಶಿವಾಜಿ, ಉಡುಪಿ ಡಿಡಿಆರ್‌ಸಿ ಸದಸ್ಯ ಕಾರ್ಯದರ್ಶಿ ಡಾ.ಗಣನಾಥ ಶೆಟ್ಟಿ ಎಕ್ಕಾರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News