ಸಮುದ್ರಕ್ಕಿಳಿದು ಮೋಜು ಮಾಡುತ್ತಿದ್ದ ಪ್ರವಾಸಿಗರಿಗೆ ಬುದ್ಧಿಮಾತು ಹೇಳಿದ ಎಸ್ಸೈ

Update: 2024-07-06 15:26 GMT

ಕುಂದಾಪುರ, ಜು.6: ನಿರಂತರ ಸುರಿಯುತ್ತಿರುವ ಮಳೆಯಿಂದ ಪ್ರಕ್ಷುಬ್ಧ ಗೊಂಡ ಮರವಂತೆ ಬೀಚ್‌ನ ಸಮುದ್ರದಲ್ಲಿ ಮೋಜು ಮಾಡುತ್ತಿದ್ದ ಹೊರ ಜಿಲ್ಲೆ ಹಾಗೂ ರಾಜ್ಯದ ಪ್ರವಾಸಿಗರಿಗೆ ಗಂಗೊಳ್ಳಿ ಠಾಣಾ ಎಸ್ಸೈ ಹರೀಶ್ ಆರ್. ಬುದ್ಧಿ ಮಾತಿನೊಂದಿಗೆ ಎಚ್ಚರಿಕೆ ನೀಡಿ ಕಳುಹಿಸಿರುವ ಘಟನೆ ಇಂದು ನಡೆದಿದೆ.

ಮಳೆಗಾಲದಲ್ಲಿ ಮರವಂತೆ ಸಮುದ್ರದ ನೀರಿಗೆ ಇಳಿಯದಂತೆ ಪೊಲೀಸರು ಹಲವು ಮುಂಜಾಗೃತ ಕ್ರಮಕೈಗೊಂಡಿದ್ದು ರಿಬ್ಬನ್ ಕಟ್ಟುವುದು, ಸೂಚನಾ ಫಲಕ ಕೂಡ ಅಳವಡಿದ್ದರು. ಸಿಬ್ಬಂದಿ ಕೂಡ ನಿಯೋಜಿಸಲಾಗಿದೆ. ಆದರೆ ಪೊಲೀಸ್ ಸಿಬ್ಬಂದಿ, ಕರಾವಳಿ ಕಾವಲು ಪಡೆ, ಗಸ್ತಿನವರು, ಹೋಂಗಾರ್ಡ್ ಸಿಬ್ಬಂದಿ ಸಹಿತ ಸಾರ್ವಜನಿಕರು ಎಷ್ಟೇ ಮಾಹಿತಿ, ಎಚ್ಚ ರಿಕೆ ನೀಡಿದರೂ ಕೂಡ ಪ್ರವಾಸಿ ಗರು ಮಾತ್ರ ಸೆಲ್ಫಿ ಕ್ರೇಜ್ ಬಿಡುತ್ತಿಲ್ಲ. ಪ್ರವಾಸಿಗರು ಮಿತಿ ಮೀರಿ ವರ್ತಿಸಿದಲ್ಲಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಹೀಗೆ ಸಮುದ್ರದಲ್ಲಿ ಆಡುತ್ತಿದ್ದ ಪ್ರವಾಸಿಗರಿಗೆ ಗಂಗೊಳ್ಳಿ ಠಾಣಾಧಿಕಾರಿ, ಮಳೆ-ಗಾಳಿ ಅಬ್ಬರ ಇರುವುದರಿಂದ ಕಡಲಿನಲ್ಲಿ ಅಲೆಗಳ ಅಬ್ಬರ ಜಾಸ್ತಿ ಇದ್ದು, ನೀರಿಗೆ ಇಳಿಯುವುದರಿಂದ ಜೀವಕ್ಕೆ ತೊಂದರೆ ತಂದುಕೊಳ್ಳಬೇಡಿ. ಬೇರೆ ಜಿಲ್ಲೆ, ರಾಜ್ಯ ಗಳಿಂದ ಬರುವ ನಿಮಗೆ ಕಡಲಿನ ಪ್ರಕ್ಷುಬ್ದತೆ ತಿಳಿಯುವು ದಿಲ್ಲ. ಹೀಗಾಗಿ ದಡದಲ್ಲಿಯೇ ನಿಂತು ಪೋಟೋ ಕ್ಲಿಕ್ಕಿಸಿಕೊಂಡು ದೂದಿಂದಲೇ ಬೀಚ್ ನೋಡಿಕೊಂಡು ಹೋಗಿ ಎಂದು ಮನದಟ್ಟು ಮಾಡಿದರು. ಅಲ್ಲದೆ ಕಳೆದ ವರ್ಷ ನಡೆದ ಪ್ರಕರಣದ ಬಗ್ಗೆಯೂ ಪ್ರವಾಸಿಗರಿಗೆ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News