ಯುನಿವೆಫ್ ಕರ್ನಾಟಕ| "ಅರಿಯಿರಿ ಮನುಕುಲದ ಪ್ರವಾದಿಯನ್ನು” ಅಭಿಯಾನ ಉದ್ಘಾಟನೆ

Update: 2024-09-21 12:34 GMT

ಮಂಗಳೂರು : ಯುನಿವೆಫ್ ಕರ್ನಾಟಕವು ಸೆ. 20ರಿಂದ ಡಿಸೆಂಬರ್ 20ರವರೆಗೆ "ಮಾನವ ಸ್ವಾತಂತ್ರ್ಯ, ಕಲ್ಯಾಣ ಮತ್ತು ಪ್ರವಾದಿ ಮುಹಮ್ಮದ್ (ಸ)" ಎಂಬ ಕೇಂದ್ರೀಯ ವಿಷಯದಲ್ಲಿ ಮೂರು ತಿಂಗಳ ಕಾಲ ಹಮ್ಮಿಕೊಂಡಿರುವ "ಅರಿಯಿರಿ ಮನುಕುಲದ ಪ್ರವಾದಿಯನ್ನು" ಅಭಿಯಾನದ ಉದ್ಘಾಟನಾ ಶುಕ್ರವಾರ ನಗರದ ಕಂಕನಾಡಿ ಜಮೀಯತುಲ್ ಫಲಾಹ್ ಹಾಲ್‌ನಲ್ಲಿ ಜರುಗಿತು.

ಮಂಗಳೂರಿನ ಶಾ ಅಮೀರ್ ಮಸೀದಿಯ ಖತೀಬ್ ಮೌಲಾನಾ ಮುಫ್ತಿ ರಿಯಾಝುಲ್ ಹಖ್ ರಶಾದಿ ಅಭಿಯಾನವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮನುಕುಲದ ಮನಸ್ಸನ್ನು ಬದಲಾಯಿಸುವುದು ಪ್ರವಾದಿಗಳ ಮುಖ್ಯ ಧ್ಯೇಯವಾಗಿತ್ತು. ಹೃದಯ ಪರಿವರ್ತನೆಯು ನಿಜವಾದ ಸುಧಾರಣೆಯಾಗಿದೆ. ಯುನಿವೆಫ್ ಕರ್ನಾಟಕದ ಈ ಅಭಿಯಾನದ ನಿರಂತರತೆಯೇ ಅದರ ಯಶಸ್ಸಿನ ಸಂಕೇತವಾಗಿದೆ. ಸರ್ವಶಕ್ತನು ಈ ಧ್ಯೇಯವನ್ನು ದೃಢವಾಗಿಸಲಿ ಮತ್ತು ಸ್ಥಿರವಾಗಿರಿ ಸಲಿ ಎಂದು ಹಾರೈಸಿದರು.

ಮುಖ್ಯ ಭಾಷಣಗೈದ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ತಮ್ಮನ್ನು ತಾವೇ ಅಜ್ಞಾನದ ಕೂಪದಲ್ಲಿ ಬಂಧಿಸಲ್ಪ ಟ್ಟಿದ್ದ ಜನಾಂಗಕ್ಕೆ ವಿಮೋಚನೆಯನ್ನು ನೀಡಿ, ಅವರನ್ನು ಸಂಸ್ಕರಿಸಿದ ಮಹಾಪುರುಷ ಪ್ರವಾದಿ ಮಹಮ್ಮದ್ (ಸ). ಇಂದೂ ಮುಸ್ಲಿಮ್ ರಾಷ್ಟ್ರಗಳು ಮಾನಸಿಕವಾಗಿ ಅಮೇರಿಕಾದ ಗುಲಾಮರಾಗಿರುವಾಗ, ಸ್ವಾತಂತ್ರ್ಯದ ಪ್ರಸ್ತುತತೆ ಮುನ್ನಲೆಗೆ ಬರುತ್ತದೆ. ಈ ನಿಟ್ಟಿನಲ್ಲಿ ಈ ಅಭಿಯಾನ ಸಂದರ್ಭೋಚಿತವಾಗಿದೆ ಎಂದರು.

ಅಭಿಯಾನ ಸಂಚಾಲಕ ವಕಾಝ್ ಅರ್ಸಲನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅತೀಕುರ್ರಹ್ಮಾನ್ ಕಿರಾಅತ್ ಪಠಿಸಿದರು. ಸಹ ಸಂಚಾಲಕ ಮುಹಮ್ಮದ್ ಆಸಿಫ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News