ನಿಷೇಧಿತ ಬುಲ್‌ಟ್ರಾಲ್ ಮೀನುಗಾರಿಕೆ: ಬೋಟ್ ಅಡ್ಡಗಟ್ಟಿ ಪ್ರತಿಭಟಿಸಿದ ನಾಡದೋಣಿ ಮೀನುಗಾರರು

Update: 2024-09-24 14:19 GMT

ಗಂಗೊಳ್ಳಿ: ಮರವಂತೆ ಮತ್ತು ನಾವುಂದದ ಸಮೀಪ ಸಮುದ್ರದ ಮಧ್ಯೆ ಬುಲ್‌ಟ್ರಾಲ್ ಮೀನುಗಾರಿಕೆ ನಡೆಸುತ್ತಿದ್ದ ಮೀನು ಗಾರಿಕೆ ಬೋಟ್ ಗಳನ್ನು ನಾಡದೋಣಿ ಮೀನುಗಾರರು ತಡೆದು ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆದಿದೆ.

ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ನಾಗೇಶ ಖಾರ್ವಿ ನೇತೃತ್ವದಲ್ಲಿ ಸುಮಾರು ನೂರಕ್ಕೂ ಹೆಚ್ಚು ನಾಡದೋಣಿ ಮೀನು ಗಾರರು ಒಟ್ಟಾಗಿ ಮರವಂತೆ ಮತ್ತು ನಾವುಂದದ ಸಮೀಪ ಸಮುದ್ರದ ಮಧ್ಯೆ ಬುಲ್‌ಟ್ರಾಲ್ ಮಾಡುತ್ತಿರುವ ಬೋಟ್‌ನ್ನು ತಡೆದು ನಿಲ್ಲಿಸಿ ಪ್ರತಿಭಟಿಸಿದರು. ಬುಲ್‌ಟ್ರಾಲ್ ಮೀನುಗಾರಿಕೆ ನಿಷೇಧಿಸಿ ಕಟ್ಟುನಿಟ್ಟಿನ ಕ್ರಮ ಜರಗಿಸುವಂತೆ ಮೀನುಗಾರರು ಸರಕಾರವನ್ನು ಆಗ್ರಹಿಸಿದ್ದಾರೆ.

ಟ್ರಾಲ್ ಬೋಟ್ ನವರು ಸಮುದ್ರದ ತೀರ ಪ್ರದೇಶದಲ್ಲಿ ಬುಲ್ ಟ್ರಾಲ್ ಮಾಡುತ್ತಿರುವ ದೃಶ್ಯಗಳು ಕಂಡು ಬಂದ್ದಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ನಾಡ ದೋಣಿ ಮೀನುಗಾರರು ಆರೋಪಿಸಿದ್ದಾರೆ.

ಬುಲ್‌ಟ್ರಾಲ್ ಮುಂದುವರಿದರೆ ನಾಡದೋಣಿ ಮೀನುಗಾರರ ಕುಟುಂಬ ಉದ್ಯೋಗ ಕಳೆದುಕೊಂಡು ಬೀದಿ ಪಾಲಾಗು ದರಲ್ಲಿ ಸಂಶಯವಿಲ್ಲ ಹಾಗೂ ನಾಡ ದೋಣಿಯ ಮೀನುಗಾರರಿಗೆ ಸಂಕಷ್ಟಕ್ಕೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮಂಗಳವಾರ ನಾಡದೋಣಿಯ ಆಯಾಯ ಭಾಗದ ಮೀನುಗಾರರು ತೀರದ ಪ್ರದೇಶದಲ್ಲಿ ಬುಲ್‌ಟ್ರಾಲ್ ಮೀನುಗಾರಿಕೆ ಮಾಡುವ ಬೋಟ್ ಗಳನ್ನು ತಡೆದು ನಿಲ್ಲಿಸಿ ಬುಲ್‌ಟ್ರಾಲ್ ಮಾಡಬೇಡಿ, ಇದರಿಂದ ನಮಗೂ ನಿಮಗೂ ತೊಂದರೆ ಆಗು ತ್ತದೆ ಮತ್ತು ಮುಂದಿನ ದಿನಗಳಲ್ಲಿ ಇದು ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಗಳಿದೆ ಎಂದು ಮನವಿ ಮಾಡಿದರು.

ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಸಚಿವರು ಮತ್ತು ಸರಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಾಡದೋಣಿ ಮೀನುಗಾರರು ಆಗ್ರಹಿಸಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ಮೀನುಗಾರರು ಮುಷ್ಕರಕ್ಕೆ ಇಳಿಯಲು ಎಡೆ ಮಾಡಿಕೊಡ ಬಾರದೆಂದು ಮನವಿ ಮಾಡಿದ್ದಾರೆ.

‘ಬುಲ್‌ಟ್ರಾಲ್ ನಿಷೇಧಿಸಿ ಸರಕಾರ ಆದೇಶ ಹೊರಡಿಸಿದರೂ ಅದನ್ನು ದಿಕ್ಕರಿಸಿ ಬುಲ್‌ಟ್ರಾಲ್ ಮೀನುಗಾರಿಕೆ ನಡೆಸುತ್ತಿ ದ್ದಾರೆ. ಇದರಿಂದ ಮೀನಿನ ಸಂತತಿ ನಾಶವಾಗುತ್ತಿದೆ. ಈ ರೀತಿಯಾದರೆ ನಾಡದೋಣಿ ಮೀನುಗಾರರು ಸಂಕಷ್ಟ ಎದುರಿ ಸಬೇಕಾಗುತ್ತದೆ. ಆದುದರಿಂದ ಸರಕಾರ ಬುಲ್‌ಟ್ರಾಲ್ ಹಾಗೂ ಲೈಟ್‌ಫಿಶಿಂಗ್ ವಿರುದ್ಧ ಸೂಕ್ತ ಕ್ರಾನೂನು ಕ್ರಮ ಕೈಗೊಳ್ಳ ಬೇಕು. ಇಲ್ಲದಿದ್ದರೆ ನಾಡದೋಣಿ ಮೀನುಗಾರರು ಮಂಗಳೂರಿನಿಂದ ಕಾರವಾರವರೆಗೆ ಬೀದಿ ಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ’

-ನಾಗೇಶ್ ಖಾರ್ವಿ, ಅಧ್ಯಕ್ಷರು, ನಾಡದೋಣಿ ಮೀನುಗಾರರ ಸಂಘ, ಬೈಂದೂರು ವಲಯ

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News