ಕನ್ನಡವು ಅಮೃತ ವಾಣಿ, ಕನ್ನಡವೇ ಕನ್ನಡಿಗರ ಅಸ್ಮಿತೆ : ಕಾರ್ಕಳ ತಹಶಿಲ್ದಾರ್ ಪ್ರತಿಭಾ

Update: 2024-10-05 12:21 GMT

ಕಾರ್ಕಳ : ಕನ್ನಡವು ಅಮೃತ ವಾಣಿ, ಕನ್ನಡವೇ ಕನ್ನಡಿಗರ ಅಸ್ಮಿತೆ ಕನ್ನಡವನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ, ಕನ್ನಡವು ವ್ಯಾವಹಾರಿಕ ಭಾಷೆಯಾಗಿ ಬೆಳೆಯಬೇಕು ಎಂದು ಕಾರ್ಕಳ ತಹಶಿಲ್ದಾರ್ ಪ್ರತಿಭಾ ಆರ್ ನುಡಿದರು.

ಅವರು ʼಕರ್ನಾಟಕ ಸಂಭ್ರಮ-50. ಹೆಸರಾಯಿತು ಕರ್ನಾಟಕ ಉಸಿರಾಗಲಿʼ ಕನ್ನಡ ಕಾರ್ಯಕ್ರಮದಡಿಯಲ್ಲಿ "ಕನ್ನಡ ಜ್ಯೋತಿ ರಥ" ಇಡೀ ರಾಜ್ಯದಾದ್ಯಂತ ಸಂಚರಿಸುತ್ತಿದ್ದು ಕಾರ್ಕಳ ಆಗಮಿಸಿದ ಸಂದರ್ಭ ಮಾತನಾಡಿದ ಅವರು ಕಾರ್ಕಳ ತಾಲೂಕಿನಲ್ಲಿ ಇಂದು ಕನ್ನಡ ರಥವನ್ನು ಸಂಭ್ರಮ-ಸಡಗರದಿಂದ ಸ್ವಾಗತ ಮಾಡಿಕೊಳ್ಳಲಾಯಿತು.

"ಕನ್ನಡವು ಮೇರು ಭಾಷೆ. ಮಾತೃ ಭಾಷಿಗರಾಗಿರುವ ನಾವು ಸಂಸ್ಕೃತಿಯಲ್ಲೂ, ವ್ಯವಹಾರದಲ್ಲೂ, ಆಚಾರ-ವಿಚಾರದಲ್ಲೂ ಕನ್ನಡವನ್ನು ಬಳಸಿದಾಗ ಮಾತ್ರ ಕನ್ನಡ ಭಾಷೆಯ ಉಳಿವು ಸಾಧ್ಯ " ಎಂದುರು.

ಕನ್ನಡವು ಅತ್ಯಂತ ಪ್ರಾಚೀನ ಭಾಷೆ. ವೈಜ್ಞಾನಿಕ ಮತ್ತು ತಾರ್ಕಿಕ ನೆಲೆಯಲ್ಲಿ ರೂಪುಗೊಂಡಿದೆ. ಕನ್ನಡವು ಲಿಪಿಗಳ ರಾಣಿ ಯಾಗಿದೆ. ಕನ್ನಡಕ್ಕಾಗಿ ಕೈಯೆತ್ತಿದರೆ ಕೈ ಕಲ್ಪವೃಕ್ಷವಾಗುತ್ತದೆ, ಕನ್ನಡಕ್ಕಾಗಿ ಕೊರಳೆತ್ತಿದರೆ ಕೊರಳು ಪಾಂಚಜನ್ಯ ವಾಗುತ್ತದೆ ಎಂದು ಕುವೆಂಪು ವರ್ಣಿಸಿದ್ದಾರೆ. ಎಂಟು ಜ್ಞಾನ ಪೀಠ ಪಡೆದು ಶ್ರೀಮಂತವಾಗಿರುವ ಕನ್ನಡವು ನಮ್ಮ ಬದುಕಿನ ಗುರುತಾಗಬೇಕು. ಸಾಹಿತ್ಯ ವನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸಬೇಕು. ಕನ್ನಡವು ಮೃತ ಭಾಷೆಯಾಗದೆ ಅಮೃತ ಭಾಷೆಯಾಗಬೇಕೆಂದರೆ ನಾವೆಲ್ಲರೂ ಕನ್ನಡಾಭಿಮಾನ ಬೆಳೆಸಿಕೊಂಡು ಕನ್ನಡ ವನ್ನು ಔನ್ನತ್ಯಕ್ಕೆ ಏರಿಸಬೇಕು ಎಂದು ಕರೆ ನೀಡಿದರು.

ಕಾರ್ಕಳ ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ಕಾರ್ಕಳ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು, ತಾಲ್ಲೂಕು ಪಂಚಾಯತ EO ಕೃಷ್ಣಾನಂದ ಮತ್ತಿತರರು ಭಾಗವಹಿಸಿದ್ದರು.

ತಹಶಿಲ್ದಾರ್ ಕಚೇರಿಯ ಸಿಬ್ಬಂದಿ ಮಂಜುನಾಥ ನಾಯಕ್, ಸೀಮಾ, ಲಕ್ಷ್ಮಿ, ಶಿವ ಪ್ರಸಾದ್, ರಿಯಾಝ್, ನವೀನ್, ಪ್ರಕಾಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News