ಸಿಆರ್‌ಝಡ್ ನಿರಪೇಕ್ಷಣಾ ಪತ್ರ ಪಡೆಯಲು ಸೂಚನೆ

Update: 2024-10-10 14:47 GMT

ಉಡುಪಿ: ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್)ದ ನಿರಪೇಕ್ಷಣಾ ಪತ್ರ ಕೋರಿ ಬರುವ ಪ್ರಸ್ತಾವನೆಗಳನ್ನು ಕೇಂದ್ರ ಸರಕಾರದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯವು ಅಭಿವೃದ್ಧಿ ಪಡಿಸಿರುವ ‘ಪರಿವೇಶ್ ಪೋರ್ಟಲ್ ೨.೦’ (PARIVESH PORTAL 2.0)ನ ಮೂಲಕವೇ ಸಲ್ಲಿಸುವಂತೆ ಸರಕಾರ ನಿರ್ದೇಶನ ನೀಡಿದೆ.

ಆದ್ದರಿಂದ ಜಿಲ್ಲಾ ವ್ಯಾಪ್ತಿಯ ಸಾರ್ವಜನಿಕರು ವಾಸ್ತವ್ಯ, ವಾಣಿಜ್ಯ, ಕೈಗಾರಿಕೆ, ಸರಕಾರಿ ಯೋಜನೆಗಳ ಕಟ್ಟಡ ನಿರ್ಮಾಣದ ಪ್ರಸ್ತಾವನೆಗಳನ್ನು ಕರಾವಳಿ ನಿಯಂತ್ರಣ ವಲಯದ ನಿರಪೇಕ್ಷಣಾ ಪತ್ರ ಕೋರಿ ಅರ್ಜಿಗಳನ್ನು ಪರಿವೇಶ್ ಪೋರ್ಟಲ್ ೨.೦ನಲ್ಲಿ ಮಾತ್ರ ಸಲ್ಲಿಸಬೇಕಾಗಿದೆ.

ಹೆಚ್ಚಿನ ಮಾಹಿತಿಗಾಗಿ ಹಾಗೂ ಪರಿವೇಶ್ ಪೋರ್ಟಲ್ ಬಳಕೆಯ ಬಗ್ಗೆ ಸಂದೇಹಗಳ ನಿವಾರಣೆಗಾಗಿ ಮತ್ತು ಮಾರ್ಗದರ್ಶ ನಕ್ಕಾಗಿ ಪ್ರಾದೇಶಿಕ ನಿರ್ದೇಶಕರು, (ಪರಿಸರ) ಉಡುಪಿ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News