ಕೆ.ಗಣೇಶ ರಾವ್‌ಗೆ ಯಕ್ಷಚೇತನ ಪ್ರಶಸ್ತಿ
Update: 2024-10-30 16:40 GMT
ಉಡುಪಿ, ಅ.30: ಉಡುಪಿಯ ಯಕ್ಷಗಾನ ಕಲಾರಂಗ ತನ್ನ ಕಾರ್ಯಕರ್ತ ರಿಗೆ ನೀಡುವ ‘ಯಕ್ಷಚೇತನ’ ಪ್ರಶಸ್ತಿಗೆ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಕೆ. ಗಣೇಶ ರಾವ್ ಆಯ್ಕೆಯಾಗಿದ್ದಾರೆ.
ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ ಕಾರ್ಯದರ್ಶಿಯಾಗಿರುವ ಗಣೇಶ ರಾವ್ ಕಳೆದ ನಾಲ್ಕು ದಶಕಗಳಿಂದ ಕಾರ್ಯಕರ್ತ, ಉಪಾಧ್ಯಕ್ಷ, ಅಧ್ಯಕ್ಷ ಹೀಗೆ ವಿವಿಧ ಸ್ಥಾನದಲ್ಲಿದ್ದು ಸಂಸ್ಥೆಯ ಉತ್ಕರ್ಷಕ್ಕೆ ಕಾರಣರಾದವರು. ಇವರು ಉಡುಪಿಯ ಹಿರಿಯ ಸಾಮಾಜಿಕ ಕಾರ್ಯಕರ್ತರು.
ಪ್ರಶಸ್ತಿ ಪ್ರದಾನ ಸಮಾರಂಭ ಇದೇ ನವೆಂಬರ್ 17ರ ರವಿವಾರ ಸಂಸ್ಥೆಯ ನೂತನ ಐವೈಸಿ ಸಭಾಭವನದಲ್ಲಿ ನಡೆಯಲಿದ್ದು ಪೇಜಾವರ ಶ್ರೀಗಳ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.