ಇಂದಿರಾ ಜಾನಕಿ ಅವರ ‘ರಾಮ ಸಾಂಗತ್ಯ’ ಕೃತಿ ಬಿಡುಗಡೆ

Update: 2024-11-11 14:16 GMT

ಉಡುಪಿ, ನ.11: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಹಾಗೂ ಗುಪ್ತಗಾಮಿನಿ ಸಾಹಿತ್ಯ ಶಾಲೆ ಉಡುಪಿ ಇವರ ಆಶ್ರಯದಲ್ಲಿ ಇಂದಿರಾ ಜಾನಕಿ ಎಸ್.ಶರ್ಮಾ ಅವರ ರಾಮ ಸಾಂಗತ್ಯ ಕೃತಿಯ ಬಿಡುಗಡೆ ಕಾರ್ಯಕ್ರಮ ಉಡುಪಿ ಕಿದಿಯೂರು ಹೋಟೆಲಿನ ಸಭಾಂಗಣದಲ್ಲಿ ರವಿವಾರ ನಡೆಯಿತು.

ಸಭಾಧ್ಯಕ್ಷತೆ ವಹಿಸಿದ್ದ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವ ಅಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಮಾತನಾಡಿ, ಇಂತಹ ಕೃತಿಗಳು ಸಮಾಜಕ್ಕೆ ಅತ್ಯಗತ್ಯ ವಾಗಿದ್ದು, ಕೃತಿಕಾರರು ಇನ್ನಷ್ಟು ಒಳ್ಳೆಯ ಕೃತಿಗಳನ್ನು ತರಲಿ ಎಂದು ಶುಭ ಹಾರೈಸಿದರು

ಕೃತಿಯನ್ನು ಹಿರಿಯ ವಿಮರ್ಶಕ ಡಾ.ಪಾರ್ವತಿ ಐತಾಳ್ ಬಿಡುಗಡೆ ಮಾಡಿದರು. ಮುಖ್ಯ ಅತಿಥಿಗಳಾಗಿ ಪ್ರೊ.ಜಿ.ಕೆ.ಭಟ್ ಸೇರಾಜೆ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ವಿಶ್ವನಾಥ್ ಶೆಣೈ ಹಾಗೂ ಅಧ್ಯಕ್ಷ ಪ್ರೊ.ಶಂಕರ್ ಉಪಸ್ಥಿತರಿದ್ದರು.

ಅಭಿಜಾತ ಕವಯತ್ರಿ ಕೀರ್ತಿಶೇಷ ಸುಶೀಲಾ ಬಾಯಿ ಮರಾಠೆ ಸಂಸ್ಮರಣೆ ಯನ್ನು ಹಿರಿಯ ಪತ್ರಕರ್ತ ಕೆ.ಶ್ರೀಕರ ಭಟ್ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಡಾ.ಹರಿಕೃಷ್ಣ ಪುನರೂರು ಅವರಿಗೆ ಗುಪ್ತಗಾಮಿನಿ ಪುರಸ್ಕಾರ ನೀಡಿ ಗೌರವಿಸ ಲಾಯಿತು. ಈ ಸಂದರ್ಭದಲ್ಲಿ ಪತ್ರಕರ್ತ ಬಾ.ಸಾಮಗ ಹಾಗೂ ಅಶ್ವಿನಿ ಎಸ್.ಶರ್ಮಾ ಅವರನ್ನು ಗೌರವಿಸಲಾಯಿತು.

ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಉಡುಪಿ ಜಿಲ್ಲಾ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು. ಜನಾರ್ದನ್ ಕೊಡವೂರು ವಂದಿಸಿದರು. ಗೀತಾ ಗಾಯನವನ್ನು ಅಂಬಿಕಾ ಉಪಾಧ್ಯ ಕಂಬಳಕಟ್ಟ ಮತ್ತು ಪ್ರಾರ್ಥನೆಯನ್ನು ಶ್ರಾವಣಿ ಶಾಸ್ತ್ರಿ ನಡೆಸಿಕೊಟ್ಟರು

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News