ರಸ್ತೆ ಬದಿ ಇರಿಸಲಾದ ಸಿಗ್ನಲ್ ಕಂಬಗಳ ತೆರವಿಗೆ ಆಗ್ರಹ

Update: 2024-11-11 14:20 GMT

ಉಡುಪಿ, ನ.11: ನಗರದ ಹಳೆ ಡಯಾನ ವೃತ್ತ, ಕಲ್ಯಾಣ್ ಆಭರಣ ಮಳಿಗೆಯ ಸನಿಹದ ಪಾದಚಾರಿ ರಸ್ತೆಯ ಮೇಲೆ ದಾಸ್ತಾನು ಇರಿಸಲಾದ ಸಿಗ್ನಲ್ ಕಂಬಗಳನ್ನು ಕೂಡಲೇ ತೆರವುಗೊಳಿಸುವಂತೆ ಸಾಮಾಜಿಕ ಕಾರ್ಯ ಕರ್ತರು ಉಡುಪಿ ನಗರಸಭೆಯನ್ನು ಆಗ್ರಹಿಸಿದ್ದಾರೆ.

ಸಿಗ್ನಲ್ ಕಂಬಗಳ ನಿರ್ಮಾಣ ಕಾಮಗಾರಿಗೆ ಪಾದಚಾರಿ ರಸ್ತೆಯ ಮೇಲೆ, ಬೃಹತ್ ಗಾತ್ರದ ಕಬ್ಬಿಣದ ಕೊಳವೆ ಹಾಗೂ ಇನ್ನೀತರ ಜೋಡಣಾ ಪರಿಕರಗಳನ್ನು ದಾಸ್ತಾನು ಮಾಡಲಾಗಿದೆ. ದಾಸ್ತಾನಿಟ್ಟು ಎರಡು ವರ್ಷಗಳು ಕಳೆದುಹೋಗಿವೆ.

ಈ ಸ್ಥಳದಲ್ಲಿ ವಾಹನಗಳು ಸಂಚರಿಸುವಾಗ ತಿರುವು ಪಡೆಯಬೇಕಾಗಿದ್ದು, ಇಲ್ಲಿರುವ ಕೊಳವೆಗಳು ವಾಹನ ಸಂಚಾರಕ್ಕೆ ಅಡ್ಡಿಪಡಿಸುತ್ತಿವೆ. ವಾಹನ ಅಪಘಾತಗಳಿಗೂ ಕಾರಣವಾಗುತ್ತಿವೆ. ಪಾದಚಾರಿ ರಸ್ತೆಯನ್ನು ಕೊಳವೆಗಳು ಕಬಳಿಸಿರುವುದ ರಿಂದ ಪಾದಚಾರಿಗಳು ನಡು ರಸ್ತೆಯಲ್ಲಿ ಸಂಚರಿಸಬೇಕಾದ ಪರಿಸ್ಥಿತಿಯು ಎದುರಾಗಿದೆ.

ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಇಲ್ಲಿರುವ ಕಬ್ಬಿಣ ಪರಿಕರಗಳನ್ನು ಉಡುಪಿ ನಗರಾಡಳಿತ, ಜಿಲ್ಲಾಡಳಿತವು ವಾರಸುದಾರರ ಮೂಲಕ ಆದಷ್ಟು ಬೇಗ ವಿಲೇವಾರಿ ಮಾಡಿಸಬೇಕೆಂದು ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಸಹಸಂಚಾಲಕ ತಾರಾನಾಥ್ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News