ಯುವಕ ಆತ್ಮಹತ್ಯೆ

Update: 2024-11-11 15:24 GMT

ಕುಂದಾಪುರ: ಕುಡಿತದ ಚಟ ಹೊಂದಿದ್ದ ವ್ಯಕ್ತಿಯೊಬ್ಬರು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.

ಮೃತರನ್ನು ತಲ್ಲೂರು ಗ್ರಾಮದ ಚರ್ಚ್ ರಸ್ತೆಯ ಪಾರ್ತಿಕಟ್ಟೆ ನಿವಾಸಿ ಸ್ಟೆಲ್ಲಾ ಎಂಬವರ ಮಗ ರೈನಿಶ್ ರಿಹಾನ್(33) ಎಂದು ಗುರುತಿಸಲಾಗಿದೆ. ವಿಪರೀತ ಮದ್ಯಪಾನದ ಚಟ ಹೊಂದಿದ್ದ ಇವರು ತಾಯಿಯಲ್ಲಿ ಹಣವನ್ನು ಕೇಳಿ ಗಲಾಟೆ ಮಾಡಿ ಅ.29ರಂದು ಮನೆಯಿಂದ ಹೋಗಿದ್ದರು.

ಇದೇ ವಿಚಾರವಾಗಿ ಮನನೊಂದು ಇಲಿಪಾಷಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಇವರು, ನ.8ರಂದು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಇವರು, ಚಿಕಿತ್ಸೆ ಫಲಕಾರಿಯಾಗದೆ ನ.11ರಂದು ಬೆಳಗ್ಗೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News