ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ ಪ್ರಾರಂಭಿಸಲು ಅರ್ಜಿ ಆಹ್ವಾನ
ಉಡುಪಿ, ನ.12: ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರವನ್ನು ಪ್ರಾರಂಭಿಸಲು ಸೊಸೈಟಿ ರಿಜಿಸ್ಟ್ರೇಷನ್ ಆ್ಯಕ್ಟ್/ ಟ್ರಸ್ಟ್ ಆ್ಯಕ್ಟ್ ಅಡಿ ನೋಂದಣಿಯಾದ ಅರ್ಹ ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಂಸ್ಥೆಯು ನೋಂದಣಿ ಹೊಂದಿ ಕನಿಷ್ಠ ಎರಡು ವರ್ಷಗಳಾಗಿರಬೇಕು. ಹಗಲು ಯೋಗಕ್ಷೇಮ ಕೇಂದ್ರದಲ್ಲಿ ಸರಕಾರದ ಆದೇಶಗಳಲ್ಲಿ ನಿಗದಿ ಪಡಿಸಲಾದ ವಿದ್ಯಾರ್ಹತೆಯುಳ್ಳ ಸೇವಾ ಮನೋಭಾವದ ಸಿಬ್ಬಂದಿಗಳನ್ನು, ಹಿರಿಯ ನಾಗರಿಕರ ಅವಶ್ಯಕತೆಗಳನ್ನು ಪೂರೈಸುವ ಮೂಲಭೂತ ಸೌಕರ್ಯ ಒದಗಿಸುವ ಸೇವಾ ಮನೋಭಾವ ಹೊಂದಿರುವ ಆಡಳಿತ ಮಂಡಳಿಯನ್ನು ಹಾಗೂ ಸಂಸ್ಥೆಯು ಆಡಳಿತ ಮಂಡಳಿಯ ಕರ್ತವ್ಯಗಳನ್ನು ಮತ್ತು ಜವಾಬ್ದಾರಿಗಳನ್ನು ಸ್ಪಷ್ಟ ಹಾಗೂ ಖಚಿತವಾಗಿರುವ ಉಪನಿಯನಗಳನ್ನು ಹೊಂದಿರಬೇಕು.
ಸಂಸ್ಥೆಯ ಆರ್ಥಿಕ ಸ್ಥಿತಿಗತಿ ಸಧೃಡವಾಗಿರಬೇಕು. ಯಾವುದೇ ಓರ್ವ ವ್ಯಕ್ತಿ ಹಾಗೂ ಜನಾಂಗದ ಲಾಭಕ್ಕಾಗಿ ಸಂಸ್ಥೆಯನ್ನು ನಡೆಸುತ್ತಿರಬಾರದು ಹಾಗೂ ಯಾವುದೇ ಜಾತಿ, ಪಂಥ, ಮತ ಮತ್ತು ಭಾಷೆಗಳನ್ನು ಪರಿಗಣಿಸದೇ ಎಲ್ಲರಿಗೂ ಸೌಲಭ್ಯ ಒದಗಿಸಬೇಕು.
ಅರ್ಜಿ ಸಲ್ಲಿಸಲು ನವೆಂಬರ್ 20 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಸಬಲೀಕರಣ ಅಧಿಕಾರಿ ಕಛೇರಿ, ತಳ ಅಂತಸ್ತು, ರಜತಾದ್ರಿ, ಮಣಿಪಾಲ, ಉಡುಪಿ ದೂ.ಸಂಖ್ಯೆ: 0820-2574810ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.