ಎಸ್ಸೆಸ್ಸೆಫ್ ಉಡುಪಿ ಡಿವಿಷನ್ ಮಟ್ಟದ ಸಾಹಿತ್ಯೋತ್ಸವ

Update: 2024-11-16 13:15 GMT

ಬ್ರಹ್ಮಾವರ : ಎಸ್ಸೆಸ್ಸೆಫ್ ಉಡುಪಿ ಡಿವಿಷನ್ ವತಿಯಿಂದ ಸಾಹಿತ್ಯೋತ್ಸವ ಸ್ಪರ್ಧಾ ಕಾರ್ಯಕ್ರಮವು ಬಾರಕೂರು ರಂಗನಕೆರೆಯ ರಹ್ಮಾನಿಯಾ ಜುಮ್ಮಾ ಮಸೀದಿ ವಠಾರದಲ್ಲಿ ಜರಗಿತು.

ಕಾರ್ಯಕ್ರಮವನ್ನವು ಸಾಹಿತ್ಯೋತ್ಸವ ಗೌರವಧ್ಯಕ್ಷ ರಝಾಕ್ ಮದದಿ ಅಂಬಾಗಿಲು ಉದ್ಘಾಟಿಸಿದರು. ರಂಗನಕೆರೆ ಖುವ್ವತುಲ್ ಆರ್.ಜೆ.ಎಂ ಖತೀಬ್ ಸೈಯ್ಯೆದ್ ಜುನೈದ್ ಅರ್ರಿಫಾಯಿ ತಂಲ್ ಧ್ವಜಾರೋಹಣ ನೆರವೇರಿಸಿದರು. ಅಧ್ಯಕ್ಷತೆಯನ್ನು ಎಸ್ಸೆಸ್ಸೆಫ್ ಉಡುಪಿ ಡಿವಿಷನ್ ಅಧ್ಯಕ್ಷ ಇಮ್ತಿಯಾಝ್ ಸಂತೋಷ್ ನಗರ ವಹಿಸಿದ್ದರು.

ಎರಡು ದಿನಗಳಲ್ಲಿ ನಡೆದ ಈ ಸ್ಪರ್ಧಾಕೂಟದಲ್ಲಿ ಸಾಸ್ತಾನ ಶಾಖೆ ಪ್ರಥಮ, ಭದ್ರಗಿರಿ ಶಾಖೆ ದ್ವಿತೀಯ ಹಾಗೂ ಹೂಡೆ ಶಾಖೆ ತೃತೀಯ ಪ್ರಶಸ್ತಿ ಪಡೆದು ಕೊಂಡಿತು. ಈ ಸಂದರ್ಭದಲ್ಲಿ ೨೦೨೪ನೇ ಸಾಲಿನ ೬ನೇ ಅವಧಿಯ ಮರ್ಹೂಂ ಸಫ್ವಾನ್ ರಂಗನಕೆರೆ ಪ್ರಶಸ್ತಿಯನ್ನು ಉಡುಪಿ ಡಿವಿಷನ್ ಮಾಜಿ ಅಧ್ಯಕ್ಷ ಸೈಯ್ಯದ್ ಯೂಸುಫ್ ನವಾಝ್ ಅಲ್ ಹುಸೈನಿ ನೂರಿ ಹೂಡೆ ತಂಳ್ ಹಾಗೂ ಸಂಘಟನಾ ಸಲಹೆಗಾರ ಸೈಯ್ಯದ್ ಇಬ್ರಾಹಿಂ ಜುನೈದ್ ಅರ್ರಿಫಾಯಿ ತಂಲ್ ರಂಗನಕೆರೆ ಅವರಿಗೆ ಪ್ರದಾನ ಮಾಡಲಾಯಿತು.

ಸಾಹಿತ್ಯೋತ್ಸವ ಚೇಯರ್‌ಮೆನ್ ರಝಾಕ್ ಸಾಸ್ತಾನ, ಮೀಡಿಯಾ ಕಾರ್ಯದರ್ಶಿ ಆಶಿಕ್ ಸರಕಾರಿಗುಡ್ಡೆ, ಸಮಾಜ ಸೇವಕ ಡಿವಿಷನ್ ಹೆಲ್ಪ್ ಡೆಸ್ಕ್‌ನ ಬಿಲಾಲ್ ಮಲ್ಪೆಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಆರ್‌ಜೆಎಂ ಅಧ್ಯಕ್ಷ ಉಮರುಲ್ ಫಾರೂಕ್, ಕಾರ್ಯದರ್ಶಿ ರಫೀಕ್, ಕೋಶಾಧಿಕಾರಿ ಸುಲೈಮಾನ್ ಸಾಗರ್, ಸಾಹಿತ್ಯೋತ್ಸವ ಸಮಿತಿಯ ಚೆಯರ್‌ಮೆನ್ ರಝಾಕ್ ಸಾಸ್ತಾನ, ವೈಸ್ ಚೆಯರ್‌ಮೆನ್ ಮಜೀದ್ ಕಟಪಾಡಿ, ಡಿವಿಷನ್ ಗೌರವ ಸಲಹೆಗಾರ ರಶೀದ್ ರಝ್ವಿ ಕಟಪಾಡಿ, ಬ್ರಹ್ಮಾವರ ಮುಸ್ಲಿಂ ಜಮಾಅತ್ ನಾಯಕರಾದ ಮುಸ್ತಾಕ್ ಹೊನ್ನಾಳ, ಎಸ್‌ವೈಎಸ್ ರಂಗನಕೆರೆ ಅಧ್ಯಕ್ಷ ಹಮೀದ್ ಮದನಿ, ಕಾರ್ಯದರ್ಶಿ ಆಸೀಫ್, ಡಿವಿಷನ್ ಕೋಶಾಧಿಕಾರಿ ಮುತ್ತಲಿಬ್ ರಂಗನಕೆರೆ, ಡಿವಿಷನ್ ಹಿರಿಯ ನಾಯಕರಾದ ಶಂಶುದ್ದೀನ್, ಇಬ್ರಾಹಿಂ ರಂಗನಕೆರೆ, ಆಸೀಫ್ ಸರಕಾರಿಗುಡ್ಡೆ, ಇಮ್ತಿಯಾಝ್ ಹೊನ್ನಾಳ, ನಝೀರ್, ರಮೀಝ್ ಸಾಸ್ತಾನ, ಅಲ್ತಾಫ್ ಮಲ್ಪೆ, ಅನ್ಸಾರ್, ಅಮೀರ್ ದೊಡ್ಡಣಗುಡ್ಡೆ, ಮುಖ್ಯ ತೀರ್ಪುಗಾರ ಇಸ್ಮಾಹಿಲ್ ಮಾಸ್ಟರ್ ಮಂಗಿಲಪದವು ಮೊದಲಾದವರು ಉಪಸ್ಥಿತರಿದ್ದರು.

ಡಿವಿಷನ್ ನಿಕಟಪೂರ್ವ ಅಧ್ಯಕ್ಷ ಇಬ್ರಾಹಿಂ ಪಾಲಿಲಿ ಮಣಿಪುರ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಡಿವಿಷನ್ ಸಾಹಿತ್ಯೋತ್ಸವ ಸಮಿತಿ ಸಂಚಾಲಕ ಸಿದ್ದೀಕ್ ಸಂತೋಷ್ ನಗರ ಸ್ವಾಗತಿಸಿದರು. ಡಿವಿಷನ್ ಕಾರ್ಯದರ್ಶಿ ಅಬ್ದುಲ್ ರಹೀಂ ಸಾಸ್ತಾನ ವಂದಿಸಿದರು. ಸಾಹಿತ್ಯೋತ್ಸವ ಸಹ ಸಂಚಾಲಕ ನಾಸೀರ್ ಭದ್ರಗಿರಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News