ನ.17ರಂದು ಕಲಾವಿದ ವಿಶ್ವನಾಥ ಆಚಾರ್ಯರ ಯಕ್ಷಯಾನದ 30ರ ಸಂಭ್ರಮ

Update: 2024-11-15 16:32 GMT

ಕುಂದಾಪುರ, ನ.15: ಕಲಾ ಜೀವನದ 30ರ ಸಂಭ್ರಮವನ್ನು ತೊಂಬಟ್ಟು ಯಕ್ಷಯಾನದ 30ರ ವಿಶ್ವ ಸಂಭ್ರಮವಾಗಿ ಯಕ್ಷಗಾನ ಪ್ರದರ್ಶನವನ್ನು ಇದೇ ನ.17ರಂದು ಸಂಜೆ 6:30ಕ್ಕೆ ಸಿದ್ಧಾಪುರದ ರಂಗನಾಥ ಸಭಾಭವನದಲ್ಲಿ ಆಯೋಜಿಸ ಲಾಗಿದೆ ಎಂದು ಹಾಲಾಡಿ ಮೇಳದ ಪ್ರಧಾನ ಕಲಾವಿದ ವಿಶ್ವನಾಥ ಆಚಾರ್ಯ ತೊಂಬಟ್ಟು ಹೇಳಿದ್ದಾರೆ.

ಕುಂದಾಪುರ ಪ್ರೆಸ್‌ಕ್ಲಬ್‌ನಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು ಮಾರಣಕಟ್ಟೆ ಮೇಳದ ಯಜಮಾನರ ಪೂರ್ಣ ಸಹಕಾರದೊಂದಿಗೆ ಈ ಕಾರ್ಯಕ್ರಮ ಜರುಗಲಿದೆ. ಆ ದಿನ ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ ಸಿದ್ಧಾಪುರ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಗಂಗಾ ನಂದನ ಹಾಗೂ ಅಗ್ನಿ ನಂದನೆ ಎನ್ನುವ ಪೌರಾಣಿಕ ಪ್ರಸಂಗಗಳ ಪ್ರದರ್ಶನ ನಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ಸಂಕ್ಷಿಪ್ತ ಸಭಾ ಕಾರ್ಯಕ್ರಮ ನಡೆಯಲಿದ್ದು ಶಾಸಕ ಕಿರಣ್ ಕುಮಾರ್ ಕೊಡ್ಗಿ, ಉದ್ಯಮಿ ಕೃಷ್ಣ ಮೂರ್ತಿಮಂಜ ಮಾರಣಕಟ್ಟೆ, ಉದ್ಯಮಿ ಗೋವಿಂದ ಬಾಬು ಪೂಜಾರಿ, ಶಂಕರ ಐತಾಳ್ ಅಮಾಸೆಬೈಲು ಭಾಗವಹಿಸಲಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಎಂ.ಕೆ.ರಮೇಶ ಆಚಾರ್ಯ, ಶಿಕ್ಷಕರಾದ ತಿಮ್ಮಪ್ಪ ನಗರ, ಸಮಾಜ ಸೇವಕ ಬೆಂಕಿಮಣಿ ಸಂತೋಷ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು ಎಂದರು.

ಸುದ್ಧಿಗೋಷ್ಠಿಯಲ್ಲಿ ಯಕ್ಷಗಾನದ ಹಾಸ್ಯ ಕಲಾವಿದ ರವೀಂದ್ರ ದೇವಾಡಿಗ ಕಮಲಶಿಲೆ, ಧರ್ಮಸ್ಥಳ ಮೇಳದ ಸ್ತ್ರೀವೇಷ ಕಲಾವಿದ ಶರತ್ ಶೆಟ್ಟಿ ತೀರ್ಥಹಳ್ಳಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News