ಎರಡು ಬಡ ಕುಟುಂಬಗಳಿಗೆ ಮನೆಗಳ ಹಸ್ತಾಂತರ
ಕುಂದಾಪುರ: ಜಮಿಯತುಲ್ ಮುಸ್ಲಿಮೀನ್ ಕುಂದಾಪುರ ಹಾಗೂ ಕುಂದಾಪುರ ಗ್ರೂಪ್ ಚಾರಿಟೇಬಲ್ ಸೆಂಟರ್ ಸಹ ಯೋಗದಲ್ಲಿ ದಾನಿಗಳ ನೆರವಿನೊಂದಿಗೆ ಸುಮಾರು ೧೦ಲಕ್ಷ ರೂ. ವೆಚ್ಚದಲ್ಲಿ ಕುಂದಾಪುರ ಕಸಬಾ ಗುಡ್ಡೆಯ ಮೈಮುನಾ ಹಾಗೂ ರಮಿಝ ಅವರ ಬಡ ಕುಟುಂಬಗಳಿಗೆ ನಿರ್ಮಿಸಲಾದ ಎರಡು ಮನೆಗಳನ್ನು ಸೋಮವಾರ ಹಸ್ತಾಂತರಿಸಲಾಯಿತು.
ಮೌಲನಾ ಶಾಹಿದ್ ಹುಸೇನ್ ಕಿರಾತ್ ಪಠಿಸಿದರು. ಉದ್ಯಮಿ ಶೇಕ್ ಫರೀದ್ ಭಾಷಾ ಹಾಗೂ ಹುಸೇನ್ ಮಾಸ್ಟರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕುಂದಾಪುರ ಜಮಾತಿನ ಅಧ್ಯಕ್ಷ ಎಸ್.ಎಂ. ವಸೀಮ್ ಶುಭ ಹಾರೈಸಿದರು.
ಅತಿಥಿಗಳಾಗಿ ಉದ್ಯಮಿಗಳಾದ ಕೋಟ ಇಬ್ರಾಹಿಂ ಸಾಹೇಬ್, ಅಶ್ಮತ್ ಅಲಿ ಕತಾರ್, ಪುರಸಭಾ ಸದಸ್ಯ ಅಬು ಮಹಮ್ಮದ್, ಕೆಜಿಸಿಯ ಸದಸ್ಯರಾದ ಮುಹಮ್ಮದ್ ಆಯಾಜ್, ಅಮ್ಜದ್ ಖಾನ್, ಉಮ್ಮಿದ್ ಫೌಂಡೇಶನ್ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ಮಾತನಾಡಿದರು.
ಮನೆಗಳ ನಿರ್ಮಾಣ ಕಾರ್ಯದಲ್ಲಿ ಶ್ರಮಿಸಿದ ಫರ್ಹ ನಾಸೀರ್ ಅವರನ್ನು ಸನ್ಮಾನಿಸಲಾಯಿತು. ಜಮಾತ್ ಕಾರ್ಯದರ್ಶಿ ಶಮ್ಸ್ ತಬ್ರೇಜ್, ಬಿ.ರಫೀಕ್, ಶಾಬಾನ್, ಶಾಬುದ್ದಿನ್, ನೌಶಾದ್, ಸಾದಿಕ್, ಹನೀಫ್, ಜೆ.ಎಂ.ಜಾಫರ್, ಸುಹೇಲ್ ಉಪಸ್ಥಿತರಿದ್ದರು. ಆದಿಲ್ ಭಾಷಾ ಕಾರ್ಯಕ್ರಮ ನಿರೂಪಿಸಿದರು.