ಕೋಳಿ ಅಂಕಕ್ಕೆ ದಾಳಿ: ನಾಲ್ವರು ವಶಕ್ಕೆ
Update: 2024-12-23 15:31 GMT
ಉಡುಪಿ, ಡಿ.23: ಕುತ್ಪಾಡಿ ಕಾನಂಗಿ ಬ್ರಹ್ಮವಿಷ್ಣು ಮಹೇಶ್ವರ ದೇವಸ್ಥಾನದ ಬಳಿ ಡಿ.22ರಂದು ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳನ್ನು ಕುಮಾರ್, ಕೋರೋಹನ್ ಜೋವಿಯಲ್, ನವೀನ್, ರಕ್ಷಿತ್ ಎಂದು ಗುರುತಿಸಲಾಗಿದೆ. ಇತರರು ಅಲ್ಲಿಂದ ಓಡಿ ಹೋಗಿದ್ದಾರೆ. ಆರೋಪಿಗಳ ವಶದಲ್ಲಿದ್ದ 9 ಕೋಳಿ ಮತ್ತು 550ರೂ. ನಗದು ವಶಕ್ಕೆ ಪಡೆದು ಕೊಳ್ಳಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.