ಕ್ರಾಸ್‌ರೋಡ್ ವೈಭವ: ಪಿಪಿಸಿ ಪಿಯು ಮಡಿಲಿಗೆ ಸಮಗ್ರ ಪ್ರಶಸ್ತಿ
ಬ್ರಹ್ಮಾವರ, ನ.27: ಇಲ್ಲಿನ ಕ್ರಾಸ್‌ಲ್ಯಾಂಡ್ ಕಾಲೇಜಿನ ವತಿಯಿಂದ ಉಡುಪಿ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಮಂಗಳವಾರ ನಡೆದ ‘ಕ್ರಾಸ್‌ರೋಡ್ ವೈಭವ’ದ ಸಮಗ್ರ ಪ್ರಶಸ್ತಿಯನ್ನು ಉಡುಪಿಯ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ತಂಡ ಗೆದ್ದುಕೊಂಡಿತು.
ದ್ವಿತೀಯ ಸ್ಥಾನವನ್ನು ಕುಂದಾಪುರದ ವೆಂಕಟರಮಣ ಪದವಿ ಪೂರ್ವ ಕಾಲೇಜು ಪಡೆದುಕೊಂಡಿತು. ಕನ್ನಡ ಭಾಷಣ ಸ್ಫರ್ಧೆಯಲ್ಲಿ ಹೆಬ್ರಿಯ ಅಮೃತಭಾರತಿ ಕಾಲೇಜಿನ ಅನ್ನಪೂರ್ಣ ಎನ್ ಪ್ರಥಮ, ಕೋಟ ವಿವೇಕ ಪಿಯು ಕಾಲೇಜಿನ ಸಹನಾ ಅಡಿಗ ದ್ವಿತೀಯ, ಇಂಗ್ಲೀಷ್ ಭಾಷಣದಲ್ಲಿ ಕುಂದಾಪುರ ವೆಂಕಟರಮಣ ಪಿಯು ಕಾಲೇಜಿನ ಶ್ರೀನಿಧಿ ಪ್ರಥಮ, ಉಡುಪಿ ಪಿ.ಪಿ.ಸಿ ಪಿಯು ಕಾಲೇಜಿನ ತೃಪ್ತಿ ದ್ವಿತೀಯ ಬಹುಮಾನ ಪಡೆದರು.
ಸಮೂಹ ಗಾಯನ ಸ್ಪರ್ಧೆಯಲ್ಲಿ ಉಡುಪಿಯ ಪಿಪಿಸಿ ಪಿಯು ಕಾಲೇಜು ಪ್ರಥಮ, ಕುಂದಾಪುರ ವೆಂಕಟರಮಣ ಪಿಯು ಕಾಲೇಜು ದ್ವಿತೀಯ, ಸೆಮಿ ಕ್ಲಾಸಿಕಲ್ ನೃತ್ಯದಲ್ಲಿ ಕುಂದಾಪುರ ವೆಂಕಟರಮಣ ಪಿಯು ಕಾಲೇಜು ಪ್ರಥಮ, ಹೆಬ್ರಿಯ ಅಮೃತಭಾರತಿ ಪಿಯು ಕಾಲೇಜು ದ್ವಿತೀಯ ಬಹುಮಾನ ಪಡೆದವು.
ಬೆಂಕಿ ಇಲ್ಲದೆ ಅಡುಗೆ ತಯಾರಿಯಲ್ಲಿ ಬ್ರಹ್ಮಾವರದ ಎಸ್.ಎಂ.ಎಸ್ ಕಾಲೇಜು ಪ್ರಥಮ, ಹೆಬ್ರಿಯ ಅಮೃತಭಾರತಿ ದ್ವಿತೀಯ ಮತ್ತು ರಸಪ್ರಶ್ನೆಯಲ್ಲಿ ಪಿಪಿಸಿ ಪಿಯು ಕಾಲೇಜು ಪ್ರಥಮ, ಕೋಟ ವಿವೇಕ ಪಿಯು ದ್ವಿತೀಯ ಸ್ಥಾನ ಪಡೆದುಕೊಂಡವು.
ಕಾಲೇಜಿನ ಸಂಚಾಲಕಿ ಲಾಲಿ ಎ ಮ್ಯಾಥ್ಯೂ ಬಹುಮಾನ ವಿತರಿಸಿ ಮಾತನಾಡಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಅಗತ್ಯವಾಗಿದೆ ಎಂದರು. ಉದ್ಯಮಿ ಹಾಗೂ ಕಾಲೇಜಿನ ಹಳೆವಿದ್ಯಾರ್ಥಿ ಹರೀಶ ಶೆಟ್ಟಿ ವಿಜೇತರಿಗೆ ಬಹುಮಾನ ವಿತರಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ರಾಬರ್ಟ್ ಕ್ಲೈವ್, ಉಪಪ್ರಾಂಶುಪಾಲ ಬಿಜು ಜೇಕಬ್, ಕಾರ್ಯಕ್ರಮದ ಸಂಘಟಕರಾದ ಸುಕುಮಾರ್ ಶೆಟ್ಟಿಗಾರ್, ಸರಿತಾ ಉಪಸ್ಥಿತರಿದ್ದರು.
ಬೆಳಿಗ್ಗೆ ಹೆಬ್ರಿ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅಮರೀಶ ಹೆಗ್ಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಿಯು ವಿದ್ಯಾರ್ಥಿ ಅಶ್ವಿನ್ ಸ್ವಾಗತಿಸಿ ವಿದ್ಯಾರ್ಥಿನಿ ವಿಶಾಲ ಪೂಜಾರಿ ವಂದಿಸಿದರು. ಮರ್ಲಿನ್ ಕಾರ್ಯಕ್ರಮ ನಿರೂಪಿಸಿದರು.
ಕೆನರಾ ಬ್ಯಾಂಕ್, ಬ್ರಹ್ಮಾವರ ರೋಟರಿ ಕ್ಲಬ್, ಬ್ರಹ್ಮಾವರ ಬಾರ್ಕೂರು ಲಯನ್ಸ್ ಕ್ಲಬ್, ವೈ.ಎಂ.ಸಿ.ಎ ಬ್ರಹ್ಮಾವರ ಘಟಕ, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘ, ಪ್ರವೀಣ್ ಶೆಟ್ಟಿ ಮುದ್ದೂರು, ಬ್ರಹ್ಮಾವರದ ಕ್ರಿಯೇಟಿವ್ ಕಂಪ್ಯೂಟರ್ ಸೆಂಟರ್ ಪ್ರಾಯೋಜಕತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.