ಬೈಕಿನಲ್ಲಿ ವೀಲಿಂಗ್: ಸವಾರನ ವಿರುದ್ಧ ಪ್ರಕರಣ ದಾಖಲು
Update: 2024-12-18 14:59 GMT
ಉಡುಪಿ, ಡಿ.18: ಅಂಬಲಪಾಡಿ ಬುಲೆಟ್ ಶೋರೂಮ್ ಎದುರುಗಡೆ ಸರ್ವಿಸ್ ರಸ್ತೆಯಲ್ಲಿ ದ್ವಿಚಕ್ರ ವಾಹನದ ಮುಂದಿನ ಚಕ್ರವನ್ನು ಮೇಲೆಕ್ಕೆತ್ತಿ ವೀಲಿಂಗ್ ಮಾಡಿರುವ ಆರೋಪದಡಿ ಸವಾರನ ವಿರುದ್ಧ ಉಡುಪಿ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ನಿರೀಕ್ಷಿತ್ ಎಂಬಾತ ಡಿ.10ರಂದು ಮಧ್ಯಾಹ್ನ ತನ್ನ ದ್ವಿಚಕ್ರ ವಾಹನದ ಮುಂದಿನ ಚಕ್ರವನ್ನು ಮೇಲೆಕ್ಕೆತ್ತಿ ವೀಲಿಂಗ್ ಮಾಡಿ ಸಾರ್ವಜನಿಕರ ಪ್ರಾಣಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಚಾಲನೆ ಮಾಡಿರುವುದಾಗಿ ದೂರಲಾಗಿದೆ.