ವಾಯುಪಡೆಯಲ್ಲಿ ಏರ್‌ಮ್ಯಾನ್, ಅಗ್ನಿವೀರ್ ಹುದ್ದೆ: ಅರ್ಜಿ ಆಹ್ವಾನ

Update: 2025-01-13 15:05 GMT

ಉಡುಪಿ: ಭಾರತೀಯ ವಾಯುಪಡೆಯಲ್ಲಿ ಏರ್‌ಮ್ಯಾನ್ ಮತ್ತು ಅಗ್ನಿವೀರ್ ಹುದ್ದೆಗಳಿಗೆ ಅರ್ಹ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಏರ್‌ಮ್ಯಾನ್ ಆಗಿ ಗ್ರೂಪ್ ವೈ (ತಾಂತ್ರಿಕವಲ್ಲದ) (ಎ) ವೈದ್ಯಕೀಯ ಸಹಾಯಕ ವೃತ್ತಿಗೆ ಸೇರಲು 10+2 ವಿದ್ಯಾರ್ಹತೆ ಹೊಂದಿದ ಅವಿವಾಹಿತ ಅಭ್ಯರ್ಥಿ 2004ರ ಜುಲೈ 3 ಮತ್ತು 2008ರ ಜುಲೈ 03ರ ನಡುವೆ ಜನಿಸಿರಬೇಕು. (ಬಿ) ವೈದ್ಯಕೀಯ ಸಹಾಯಕ ವೃತ್ತಿಗೆ ಫಾರ್ಮಸಿಯಲ್ಲಿ ಡಿಪ್ಲೋಮಾ/ ಬಿ.ಎಸ್ಸಿ ಆಗಿರುವ ಅವಿವಾಹಿತ ಅಭ್ಯರ್ಥಿ 2001ರ ಜುಲೈ 03 ಮತ್ತು 2006ರ ಜುಲೈ 03 ನಡುವೆ ಜನಿಸಿರಬೇಕು. ವಿವಾಹಿತ ಅಭ್ಯರ್ಥಿ 2001ರ ಜುಲೈ 03 ಮತ್ತು 2004ರ ಜುಲೈ 03 ನಡುವೆ ಜನಿಸಿರಬೇಕು.

ರ್ಯಾಲಿಯು ಕೇರಳ ಕೊಚ್ಚಿಯ ಎರ್ನಾಕುಲಂ ಪಿ.ಟಿ.ಉಷಾ ರಸ್ತೆಯ ಮಹಾರಾಜ ಕಾಲೇಜು ಮೈದಾನದಲ್ಲಿ ಜನವರಿ 29ರಿಂದ ಫೆಬ್ರವರಿ 6ರ ವರೆಗೆ ಮುಂಜಾನೆ 6 ಗಂಟೆಯಿಂದ 10 ಗಂಟೆಯವರೆಗೆ ನಡೆಯಲಿದ್ದು, ಮಾಹಿತಿಗಾಗಿ ವೆಬ್‌ಸೈಟ್ -www.airmenselection.cdac.in-ಗೆ ಭೇಟಿ ನೀಡಬಹುದು.

ಅಗ್ನಿವೀರ್ ವಾಯು ಹುದ್ದೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 2005ರ ಜನವರಿ 01 ಮತ್ತು 2008ರ ಜುಲೈ 01ರ ನಡುವೆ ಜನಿಸಿದವರು ಅರ್ಜಿ ಸಲ್ಲಿಸಬಹುದು. ಜನವರಿ 27 ರವರೆಗೆ - http://agnipathvayu.cdac.in- ವೆಬ್‌ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದಿ,್ರ ಮಣಿಪಾಲ ಉಡುಪಿ ಅಥವಾ ವೆಬ್‌ಸೈಟ್ - https://careerindianairforce.cdac.in-ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News