ಸಮಗ್ರ ಕೃಷಿ ಪದ್ಧತಿ ಉತ್ತೇಜನ: ಅರ್ಜಿ ಆಹ್ವಾನ

Update: 2023-09-30 14:37 GMT

ಉಡುಪಿ, ಸೆ.30: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ಹಳೆವಿದ್ಯಾರ್ಥಿ ಸಂಘದ ಸ್ಥಾಪಕ ಅಧ್ಯಕ್ಷ ಪ್ರೊ.ಜಿ.ಕೆ ವೀರೇಶ್ ಇವರು 15 ಲಕ್ಷ ರೂ.ಗಳನ್ನು ರಾಜ್ಯದ ಸಮಗ್ರ ಕೃಷಿ ಪದ್ಧತಿ ಉತ್ತೇಜನಕ್ಕಾಗಿ ಅಲ್ಯುಮಿನಿ ಅಸೋಸಿಯೇಷನ್‌ಗೆ ದಾನವಾಗಿ ನೀಡಿದ್ದು, ಇದರಿಂದ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳ ಮೂವರು ರೈತರಿಗೆ ತಲಾ 25000 ರೂ. ಮೊತ್ತದ ನಗದು ಬಹುಮಾನ ಹಾಗೂ ಪಾರಿತೋಷಕ ಗಳನ್ನು ನೀಡಲಾಗುತ್ತಿದೆ. ಅಲ್ಲದೇ ವಿಜೇತ ರೈತರನ್ನು ಸಂಪನ್ಮೂಲ ರೈತರಾಗಿ ಪರಿಗಣಿಸಲಾಗುವುದು.

ಆಯಾ ವಿಭಾಗದಿಂದ ನಾಮನಿರ್ದೇಶಿತ ರೈತರನ್ನು ಹಳೆ ವಿದ್ಯಾರ್ಥಿ ಸಂಘದಿಂದ ರಚಿಸಲಾಗುವ ತಂಡವು ರೈತರ ತಾಕುಗಳಿಗೆ ಭೇಟಿ ನೀಡಿ, ಸಮಗ್ರ ಕೃಷಿ ಪದ್ದತಿಗೆ ಅವರ ಕೊಡುಗೆ ಹಾಗೂ ವೈಯಕ್ತಿಕ ಮಾಹಿತಿ ನಮೂನೆಯ ಪರಿಶೀಲನೆ ಆಧಾರದ ಮೇಲೆ ವಿಜೇತರನ್ನು ಆಯ್ಕೆ ಮಾಡಿ, ವಿಜೇತ ರೈತರನ್ನು ಬೆಂಗಳೂರಿನಲ್ಲಿ ನಡೆಯುವ ವಿಶೇಷ ಕಾರ್ಯಕ್ರಮ ಹಾಗೂ ಸಮಗ್ರ ಕೃಷಿ ಪದ್ಧತಿ ಬಗೆಗಿನ ಒಂದು ದಿನದ ಕಾರ್ಯಾಗಾರದಲ್ಲಿ ಗೌರಸಲಾಗುವುದು.

ಆದ್ದರಿಂದ ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡ ಆಸಕ್ತ ರೈತರು ಅರ್ಜಿ ಸಲ್ಲಿ ಸಲು ಅಕ್ಟೋಬರ್ 10 ಕೊನೆಯ ದಿನವಾಗಿದ್ದು, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News