ರಾಯಲ್ ಗ್ಲೀಮ್ ಕಂಪೆನಿ, ಸೌಹಾರ್ದ ಮೂಡುಬಿದಿರೆ ವತಿಯಿಂದ ಉಚಿತ ಎಲ್ಇಡಿ ಬಲ್ಬ್ ತಯಾರಿಕೆ ತರಬೇತಿ
Update: 2024-12-06 08:56 GMT
ಉಡುಪಿ, ಡಿ. 4: ರಾಯಲ್ ಗ್ಲೀಮ್ ಕಂಪೆನಿ ಮತ್ತು ಸೌಹಾರ್ದ ಮೂಡುಬಿದಿರೆಯ ವತಿಯಿಂದ ಆಯೋಜಿಸಲಾದ ಉಚಿತ ಎಲ್ಇಡಿ ಬಲ್ಬ್ ಜೋಡಣೆ ತರಬೇತಿಯು ಉಡುಪಿಯ ಕುಂತಲ್ ನಗರದ ಬದ್ರ್ ಅಮ್ಮಾ ಮಾರ್ಗದಲ್ಲಿರುವ ಬೈತುಲ್ ಮಾಮೂರ್ ನಲ್ಲಿ ನಡೆಯಿತು.
45 ಕ್ಕೂ ಹೆಚ್ಚು ಪುರುಷರು ಮತ್ತು ಮಹಿಳೆಯರು ಭಾಗವಹಿಸಿದ್ದ ತರಬೇತಿ ಶಿಬಿರದಲ್ಲಿ ಎಲ್‌ಇಡಿ ಮತ್ತು ಎಸಿ/ಡಿಸಿ ಬಲ್ಬ್‌ಗಳ ಜೋಡಣೆಯ ತರಬೇತಿಯನ್ನು ಪ್ರಾಯೋಗಿಕವಾಗಿ ನೀಡಲಾಯಿತು.
ರಾಯಲ್ ಗ್ಲೀಮ್ ನ ಪ್ರತಿನಿಧಿಗಳಾದ ಅಬ್ದುಲ್ ಹಮೀದ್, ಮಹಮ್ಮದ್ ಹುಸೇನ್, ಸ್ವಯಂಸೇವಕರಾದ ಮುಹಮ್ಮದ್ ಶಾಕಿರ್, ಮುಹಮ್ಮದ್ ಶಾಫಿ, ಕೆ.ಎಂ. ಇಕ್ಬಾಲ್, ಉಪಸ್ಥಿತರಿದ್ದರು.
ಮುಂದಿನ ವಾರದಿಂದ, ಹೆಚ್ಚಿನ ಜನರಿಗೆ ತರಬೇತಿ ನೀಡಲು ಸ್ಥಳೀಯ ಎನ್‌ಜಿಒಗಳ ಸಹಯೋಗದೊಂದಿಗೆ, ದಕ್ಷಿಣ ಕನ್ನಡದ ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಆಯೋಜಕರು ತಿಳಿಸಿದ್ದಾರೆ.