ಮಲ್ಪೆ ಕಡಲ ತೀರದಲ್ಲಿ ಮೀನುಗಾರರಿಂದ ಸಮುದ್ರ ಪೂಜೆ

Update: 2024-08-19 13:42 GMT

ಮಲ್ಪೆ, ಆ.19: ಹೊಸ ಋತುವಿನ ಮೀನುಗಾರಿಕೆಗೆ ತೆರಳಲು ಮುನ್ನ ಮೀನುಗಾರಿಕೆ ನಡೆಸುವಾಗ ಯಾವುದೇ ತೊಂದರೆ ಗಳಾಗದಂತೆ ಗಂಗಾಮಾತೆಗೆ ಕ್ಷೀರ, ಫಲಪುಷ್ಟವನ್ನು ಅರ್ಪಿಸಿ ವಿಶೇಷ ಪೂಜೆ ಸಲ್ಲಿಸುವ ಸಮುದ್ರ ಪೂಜೆ ಸೋಮವಾರ ಮಲ್ಪೆ ವಡಭಾಂಡೇಶ್ವ ಕಡಲ ತೀರದಲ್ಲಿ ನಡೆಯಿತು.

ಮಲ್ಪೆ ಮೀನುಗಾರ ಸಂಘದ ನೇತೃತ್ವದಲ್ಲಿ ವಡಭಾಂಡ ಬಲರಾಮ ದೇವಸ್ಥಾನ ಪ್ರಧಾನ ತಂತ್ರಿ ಸುಬ್ರಹ್ಮಣ್ಯ ತಂತ್ರಿ ಮತ್ತು ದೇಗುಲ ಅನುವಂಶಿಕ ಮೊಕ್ತೇಸರ ಶ್ರೀನಿವಾಸ್ ಭಟ್ ಪೌರೋಹಿತ್ಯದಲ್ಲಿ ಬೆಳಗ್ಗೆ ವಡಭಾಂಡ ಬಲರಾಮ, ಬೊಬ್ಬರ್ಯ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಬಳಿಕ ಮೀನುಗಾರರೆಲ್ಲರು ಶೋಭಾಯಾತ್ರೆಯಲ್ಲಿ ತೆರಳಿ ವಡಭಾಂಡೇಶ್ವರ ಸಮುದ್ರತೀರದಲ್ಲಿ ಪೂಜೆಯನ್ನು ನಡೆಸಿದರು. ಆನಂತರ ಮೀನುಗಾರರು ಕ್ಷೀರಾ ಫಲಪುಷ್ಪ, ಸೀಯಾಳವನನ್ನು ಸಮುದ್ರ ರಾಜನಿಗೆ ಸಮರ್ಪಿಸಿದರು. ಯಾವುದೇ ಪ್ರಾಕೃತಿಕ ವಿಕೋಪಗಳು ಬಾರದಿರಲ್ಲಿ ಹೇರಳ ಮತ್ಸ್ಯ ಸಂಪತ್ತು ಲಭಿಸುವಂತಾಗಿ ಎಂದು ಪ್ರಾರ್ಥಿಸಿದರು.

ಮೀನುಗಾರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ, ಶಾಸಕ ಯಶಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಹರಿಯಪ್ಪ ಕೋಟ್ಯಾನ್, ಮೀನುಗಾರ ಸಂಘದ ಕಾರ್ಯದರ್ಶಿ ಜಗನ್ನಾಥ ಕಡೆಕಾರು, ಕೋಶಾಧಿಕಾರಿ ಪ್ರಕಾಶ್ ಬಂಗೇರ, ಸಂಘದ ಮಾಜಿ ಅಧ್ಯಕ್ಷ ಕೃಷ್ಣ ಎಸ್.ಸುವರ್ಣ, ಹಿರಿಯಣ್ಣ ಟಿ.ಕಿದಿಯೂರು, ಸತೀಶ್ ಕುಂದರ್, ಶಿವಪ್ಪ ಟಿ.ಕಾಂಚನ್, ಕೇಶವ ಎಂ. ಕೋಟ್ಯಾನ್ ಹಾಗೂ ವಿವಿಧ ಮೀನುಗಾರ ಸಂಘಟನೆಗಳ ಅಧ್ಯಕ್ಷರಾದ ಸುಭಾಸ್ ಮೆಂಡನ್, ಸಾಧು ಸಾಲ್ಯಾನ್, ರವಿರಾಜ್ ಸುವರ್ಣ, ನಾಗರಾಜ್ ಬಿ.ಕುಂದರ್, ನಾಗರಾಜ್ ಸುವರ್ಣ, ರತ್ನಾಕರ ಸಾಲ್ಯಾನ್, ದಯಕರ ವಿ. ಸುವರ್ಣ, ಹರೀಶ್ಚಂದ್ರ ಕಾಂಚನ್, ರಾಮಚಂದ್ರ ಕುಂದರ್, ಗಣೇಶ್ ಕುಂದರ್, ಮೋಹನ್ ಕುಂದರ್, ವಿನಯ ಕರ್ಕೇರ, ಸಾಧು ಸಾಲ್ಯಾನ್, ಸುಮಿತ್ರಾ ಕುಂದರ್, ಬೇಬಿ ಸಾಲ್ಯಾನ್, ಸುಂದರ ಸಾಲ್ಯಾನ್, ರಮೇಶ್ ಕೋಟ್ಯಾನ್, ಕಿಶೋರ್ ಡಿ. ಸುವರ್ಣ, ಗುಂಡು ಬಿ. ಅಮೀನ್, ಗಣೇಶ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News