ಹಿಂದಿನ ಸರಕಾರದ ಎಲ್ಲಾ ಯೋಜನೆಗಳಿಗೆ ತಡೆ: ಕೋಟ ಆರೋಪ

Update: 2023-10-11 13:35 GMT

ಉಡುಪಿ, ಅ.11: ಅನುದಾನ ಬಿಡುಗಡೆ ಮಾಡುವಂತೆ ಶಾಸಕ ಮುನಿರತ್ನ ಧರಣಿ ನಡೆಸುತ್ತಿದ್ದಾರೆ. ವಿರೋಧ ಪಕ್ಷದ ಶಾಸಕ ರನ್ನು ಸಿದ್ದರಾಮಯ್ಯ ಸರಕಾರ ಹಣೆಯಲು ಹೊರಟಿದೆ. ಹಿಂದಿನ ಸರಕಾರದ ಎಲ್ಲಾ ಯೋಜನೆಯನ್ನು ಈ ಸರಕಾರ ತಡೆ ಹಿಡಿದಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಜೂರಾದ ಯೋಜನೆಯ ಹಣವನ್ನು ಬಿಡುಗಡೆ ಮಾಡದೆ ತಡೆ ಹಿಡಿಯ ಲಾಗಿದೆ. ಹಿಂದುಳಿದ ವರ್ಗ, ಸಮಾಜ ಕಲ್ಯಾಣ, ಶಿಕ್ಷಣ ಇಲಾಖೆ ಎಲ್ಲಾ ಯೋಜನೆಯನ್ನು ತಡೆ ಹಿಡಿಯಲಾಗಿದೆ. ಶಾಸಕರು ಸರಕಾರದ ಭಾಗ ಎಂಬುದನ್ನು ಮರೆಯಬಾರದು ಎಂದರು.

ನಮ್ಮ ಸರಕಾರ ಇರುವಾಗ ಬೊಮ್ಮಾಯಿ ಎಲ್ಲರಿಗೂ ಅನುದಾನ ಕೊಟ್ಟಿದ್ದಾರೆ. ಅನುದಾನ ತಡೆ ಹಿಡಿಯುವುದನ್ನು ಕೂಡಲೇ ನಿಲ್ಲಿಸಬೇಕು. ಭಾಗ್ಯಗಳನ್ನು ಕೊಡುವುದು ಬಿಡುವುದು ಸರಕಾರಕ್ಕೆ ಸಂಬಂಧಪಟ್ಟ ವಿಚಾರವಾಗಿದೆ. ಹಿಂದಿನ ಸರಕಾರ ಮಂಜೂರು ಮಾಡಿ ಹಣ ಬಿಡುಗಡೆ ಮಾಡಿದ ಟೆಂಡರ್ ಆದ ಹಣವನ್ನು ಸರಕಾರ ಬಿಡುಗಡೆ ಮಾಡುತ್ತಿಲ್ಲ

ಮುನಿರತ್ನ ಮಾಡುವ ಹೋರಾಟಕ್ಕೆ ನಾವೆಲ್ಲ ಬೆಂಬಲಿಸುತ್ತಿದ್ದೇವೆ. ಇದು ಕರ್ನಾಟಕದ ಎಲ್ಲಾ ವಿರೋಧ ಪಕ್ಷದ ಶಾಸಕರಿಗೆ ಅನ್ವಯಿಸುವ ಸಮಸ್ಯೆ ಆಗಿದೆ. ಎಲ್ಲರೂ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟಿಸುವ ಪರಿಸ್ಥಿತಿ ಸೃಷ್ಟಿ ಮಾಡ ಬಾರದು ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News