ಮಣಿಪಾಲ ಎಂಐಟಿ ವಿದ್ಯಾರ್ಥಿಗೆ ಟಾಟಾ ಕ್ವಿಝ್ ಪ್ರಶಸ್ತಿ

Update: 2023-08-31 13:54 GMT

ಉಡುಪಿ, ಆ.31: ಟಾಟಾ ಕ್ರೂಸಿಬಲ್ ಕ್ಯಾಂಪಸ್ ಕ್ವಿಝ್ ಸ್ಪರ್ಧೆಯ ಕ್ಲಸ್ಟರ್ 3ರ ಫೈನಲ್‌ನಲ್ಲಿ ಮಣಿಪಾಲ ಎಂಐಟಿಯ ನಿಕುಂಜ್ ಶರ್ಮಾ ಜಯಶಾಲಿಯಾಗಿದ್ದಾರೆ.

ವಿಜೇತ ವಿದ್ಯಾರ್ಥಿ ಶರ್ಮಾ ಅಗ್ರಪ್ರಶಸ್ತಿಯೊಂದಿಗೆ 35 ಸಾವಿರ ರೂ. ನಗದು ಬಹುಮಾನ ಗೆದ್ದುಕೊಂಡಿದ್ದು, ವಲಯ 3ರಿಂದ ಫೈನಲ್‌ಗೆ ತೇರ್ಗಡೆಗೊಂಡರು. ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾನಿಲಯದ ಬಿ. ಸ್ಫೂರ್ತಿ ರನ್ನರ್‌ಅಪ್ ಆಗಿ 18,000ರೂ. ನಗದು ಬಹುಮಾನ ಪಡೆದರು.

ಈ ವರ್ಷ ಕ್ಯಾಂಪಸ್ ರಸಪ್ರಶ್ನೆಗಾಗಿ, ದೇಶವನ್ನು 24 ಕ್ಲಸ್ಟರ್‌ಗಳಾಗಿ ವಿಂಗಡಿಸಲಾಗಿದೆ ಮತ್ತು ಎರಡು ಹಂತದ ಆನ್‌ ಲೈನ್ ಪ್ರಾಥಮಿಕ ಹಂತದ ಬಳಿಕ, ಪ್ರತಿ ಕ್ಲಸ್ಟರ್‌ನಿಂದ ಅಗ್ರ 12 ಮಂದಿ ಫೈನಲಿಸ್ಟ್‌ಗಳನ್ನು ವೈಲ್ಡ್ ಕಾರ್ಡ್ ಫೈನಲ್‌ಗೆ ಶಾರ್ಟ್‌ಲಿಸ್ಟ್ ಮಾಡಿ, ಅಗ್ರ 6 ಫೈನಲಿಸ್ಟ್‌ಗಳನ್ನು ಆಯ್ಕೆ ಮಾಡಲಾಗಿತ್ತು. ಕ್ಲಸ್ಟರ್ ವಿಜೇತರು ಝೋನಲ್ ಫೈನಲ್ಸ್ ಆನ್‌ಲೈನ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ ಮತ್ತು ರಾಷ್ಟ್ರೀಯ ಫೈನಲ್ಸ್ ನೇರ ಕಾರ್ಯಕ್ರಮವಾಗಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ನಾಲ್ಕು ಝೋನಲ್ ಫೈನಲ್‌ಗಳಲ್ಲಿ ಅಗ್ರ ಅಂಕ ಪಡೆದವರು ರಾಷ್ಟ್ರೀಯ ಫೈನಲ್‌ಗೆ ಮುನ್ನಡೆಯುತ್ತಾರೆ. ರಾಷ್ಟ್ರೀಯ ಫೈನಲ್‌ನಲ್ಲಿ 8 ಫೈನಲಿಸ್ಟ್‌ಗಳು ರಾಷ್ಟ್ರೀಯ ಚಾಂಪಿಯನ್ ಪ್ರಶಸ್ತಿಗಾಗಿ ಸೆಣಸಾಡಲಿದ್ದಾರೆ. ಅಂತಿಮವಾಗಿ ಚಾಂಪಿಯನ್ ಎನಿಸಿಕೊಂಡ ವಿದ್ಯಾರ್ಥಿ 2.5 ಲಕ್ಷ ರೂ. ನಗದು ಮತ್ತು ಅಸ್ಕರ್ ಟಾಟಾ ಕ್ರೂಸಿಬಲ್ ಟ್ರೋಫಿ ಪಡೆಯುತ್ತಾರೆ.

ಇದರೊಂದಿಗೆ ರಾಷ್ಟ್ರೀಯ ವಿಜೇತರು ಮತ್ತು ಇಬ್ಬರು ಅಗ್ರ ಅಂಕ ಪಡೆದವರು ಗೌರವಾನ್ವಿತ ಟಾಟಾ ಸಮೂಹದ ಇಂಟರ್ನ್‌ಶಿಪ್ ಗೆಲ್ಲುವ ಅವಕಾಶವನ್ನು ಪಡೆಯುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News