ಮಲಗಿದ್ದಲ್ಲಿಯೇ ಬಾಲಕಿ ಮೃತ್ಯು

Update: 2023-09-27 13:35 GMT

ಮಲ್ಪೆ, ಸೆ.27: ನರ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿ ಯೊಬ್ಬರು ಮಲಗಿದ್ದಲ್ಲಿಯೇ ಮೃತಪಟ್ಟ ಘಟನೆ ಸೆ.26ರಂದು ರಾತ್ರಿ ವೇಳೆ ನಡೆದಿದೆ.

ಮೃತರನ್ನು ದಾಮೋದರ್ ಎಂಬವರ ಮಗಳು ದೃಶ್ಯ(12) ಎಂದು ಗುರುತಿಸ ಲಾಗಿದೆ. ಔಷದಿ ತೆಗೆದು ಮಲಗಿದ್ದ ದೃಶ್ಯ ಬೆಳಗ್ಗೆ ಎಬ್ಬಿಸಿದಾಗ ಮಾತನಾಡದೇ ಇದ್ದು, ಕೂಡಲೇ ಅವರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಬಾಲಕಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News