ಉಡುಪಿ ಜಿಲ್ಲಾ ಕಾಂಗ್ರೆಸ್, ಸೇವಾದಳ ಜಂಟಿಯಾಗಿ ಸ್ವಾತಂತ್ರ್ಯೋತ್ಸವ ದಿನಾಚರಣೆ
ಉಡುಪಿ : ಉಡುಪಿ ಜಿಲ್ಲಾ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಸೇವಾದಳ ಜಂಟಿಯಾಗಿ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಗಾಂಧಿ ಚೌಕದಲ್ಲಿ 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಧ್ವಜಾರೋಹಣವನ್ನು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ನೆರವೇರಿಸಿದರು.
ಸಮಾರಂಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಪೂರ್, ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಮುಖಂಡರಾದ ದಿನೇಶ್ ಪುತ್ರನ್, ಬಿ.ನರಸಿಂಹಮೂರ್ತಿ, ಭಾಸ್ಕರ್ ರಾವ್ ಕಿದಿಯೂರು, ಹರೀಶ್ ಕಿಣಿ, ಪ್ರಖ್ಯಾತ್ ಶೆಟ್ಟಿ, ಶಬೀರ್ ಅಹ್ಮದ್, ರಮೇಶ್ ಕಾಂಚನ್, ಗೀತಾ ವಾಗ್ಳೆ, ಜ್ಯೋತಿ ಹೆಬ್ಬಾರ್, ಮೀನಾಕ್ಷಿ ಮಾಧವ ಬನ್ನಂಜೆ, ಮಲ್ಲಿಕಾ ಶೆಟ್ಟಿ, ಸದಾಶಿವ ಕಟ್ಟೆಗುಡ್ಡೆ, ಲೂವೀಸ್ ಲೋಬೊ, ಸಂಜಯ ಆಚಾರ್ಯ, ಇಸ್ಮಾಯಿಲ್ ಅತ್ರಾಡಿ, ಕೃಷ್ಣ ಹೆಬ್ಬಾರ್, ರಘುಪತಿ ಬಳ್ಳಾಲ್, ಶಾಂತರಾಮ್ ಸಾಲ್ವಾಂಕರ್, ಫಾ.ಮಿಲಿಯಂ ಮಾರ್ಟಿಸ್, ಕೀರ್ತಿ ಶೆಟ್ಟಿ, ಪ್ರಶಾಂತ ಜತ್ತನ್ನ, ಹರೀಶ್ ಶೆಟ್ಟಿ ಪಂಗಾಳ, ಬಾಲಕೃಷ್ಣ ಪೂಜಾರಿ, ಮಹಾಬಲ ಕುಂದರ್, ರಮಾನಂದ ಪೈ, ಶಬರೀಶ್ ಸುವರ್ಣ, ಗಣೇಶ್ರಾಜ್ ಸರಳಬೆಟ್ಟು, ಸೆವಾದಳದ ಕಿಶೋರ್ ಕುಮಾರ್ ಎರ್ಮಾಳ್, ಲಕ್ಷ್ಮಿ, ಶರತ್ ನಾಯಕ್, ಉಮೇಶ್ ಪೂಜಾರಿ, ಕೇಶವ ಹೆಜಮಾಡಿ ಉಪಸ್ಥಿತರಿದ್ದರು
ಉಡುಪಿ ಕಾಂಗ್ರೆಸ್ ಭವನ: ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಧ್ವಜಾರೋಹಣ ನೆರವೇರಿಸುವ ಮೂಲಕ 77ನೆ ಸ್ವಾತಂತ್ಯೋತ್ಸವ ಆಚರಿಸಲಾಯಿತು.