ಉದ್ಯಾವರ: ಮಲೇರಿಯಾ, ಡೆಂಗಿ ಜ್ವರದ ಮಾಹಿತಿ ಕಾರ್ಯಕ್ರಮ
ಉಡುಪಿ, ಆ.9: ಮಣಿಪಾಲ ಕೆಎಂಸಿ ಸಮುದಾಯ ವೈದ್ಯಕೀಯ ವಿಭಾಗದ ಗ್ರಾಮೀಣ ಹೆರಿಗೆ ಮತ್ತು ಶಿಶು ಕಲ್ಯಾಣ ಕೇಂದ್ರದ ವತಿಯಿಂದ ಉದ್ಯಾವರ ಆರೋಗ್ಯ ಕೇಂದ್ರದಲ್ಲಿ ಮಲೇರಿಯಾ ಮತ್ತು ಡೆಂಗಿ ಜ್ವರದ ಕುರಿತು ಮಾಹಿತಿ ಕಾರ್ಯ ಕ್ರಮ ಬುಧವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಯಾವರ ಗ್ರಾಪಂ ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಕೇಂದ್ರದ ಮೂಲಕ ಯೋಜಿಸಿರುವ ಮಾಹಿತಿ ಶಿಬಿರಕ್ಕೆ ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದರು.
ಸಮುದಾಯ ವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕ ಡಾ.ಈಶ್ವರೀ ಕೆ.,ಲಯನ್ಸ್‌ಕ್ಲಬ್‌ನ ಮಾಜಿ ಅಧ್ಯಕ್ಷ ಪ್ರತಾಪ್ ಉದ್ಯಾವರ, ಉದ್ಯಾವರ ಗ್ರಾಪಂನ ಸದಸ್ಯ ದಿವಾಕರ, ಸುಮತಿ, ಆಬಿದ್ ಅಲಿ, ಪ್ರವೀಣಾ ಕೃಷ್ಣ, ಫ್ರಿಡಾ ಡಿಸೋಜಾ, ರೇಖಾ ಶಂಕರ, ಸರೋಜಾ ಸುಧಾಕರ, ಸರಿತಾ, ಮಾಲತಿ, ವನಿತಾ ಅವರು ಉಪಸ್ಥಿತರಿದ್ದರು.
ಸಮುದಾಯ ವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಈಶ್ವರೀ ಕೆ. ಅವರು ಮಲೇರಿಯಾ ಮತ್ತು ಡೆಂಗಿ ಜ್ವರದ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರು, ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಸಮುದಾಯ ವೈದ್ಯಕೀಯ ವಿಭಾಗದ ಸಿಬ್ಬಂದಿಗಳು ಹಾಗೂ ಉದ್ಯಾವರದ ಸುತ್ತಮುತ್ತಲಿನ ಜನತೆ ಉಪಸ್ಥಿತರಿದ್ದರು.