ವಂಡ್ಸೆ: ಚೀಟಿ ಬರೆದಿಟ್ಟು ಮಹಿಳೆ ನಾಪತ್ತೆ
ಕೊಲ್ಲೂರು, ಫೆ.1: 'ನಾನು ತುಂಬಾ ದೂರ ಹೋಗುತ್ತಿದ್ದು ನನ್ನನ್ನು ಹುಡುಕಬೇಡಿ' ಎಂದು ಚೀಟಿ ಬರೆದಿಟ್ಟು ಮಹಿಳೆಯೊಬ್ಬರು ಮನೆಬಿಟ್ಟು ಹೋದ ಘಟನೆ ಕೊಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಂಡ್ಸೆ ನಿವಾಸಿ ಅಫ್ಸನಾ (23) ಕಾಣೆಯಾದವರು.
ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮದಲ್ಲಿ ವಾಸವಿದ್ದ ವಿವಾಹಿತೆಯಾಗಿರುವ ಅಫ್ಸನಾ ಜ.30ರಂದು ರೂಮಿನಲ್ಲಿ ಮಲಗಿದ್ದವರು ಮಾರನೇ ದಿನ ಬೆಳಗ್ಗೆ ನಾಪತ್ತೆಯಾಗಿದ್ದರು. ಈ ನಡುವೆ ಮನೆಯ ಕೋಣೆಯಲ್ಲಿ ಇಂಗ್ಲೀಷ್ನಲ್ಲಿ ಬರೆದ ಚೀಟಿ ಸಿಕ್ಕಿದ್ದು, ಅದರಲ್ಲಿ 'ನಾನು ತುಂಬಾ ದೂರ ಹೋಗುತ್ತಿದ್ದು ನನ್ನನ್ನು ಹುಡುಕಬೇಡಿ' ಎಂದು ಬರೆದಿತ್ತು ಎಂದು ಅಫ್ಸನಾರ ಪತಿ ಅಬ್ದುರ್ರಹ್ಮಾನ್ ಕೊಲ್ಲೂರು ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಮಹಿಳೆಯ ಕುರಿತಂತೆ ಯಾವುದೇ ಮಾಹಿತಿ ದೊರೆತಲ್ಲಿ ಕೊಲ್ಲೂರು ಠಾಣೆ: (08254) 258233, 9480805460. ಬೈಂದೂರು ವೃತ್ತ ನಿರೀಕ್ಷಕರ ಕಚೇರಿ: (08254) 251031, 9480805434, ಕಂಟ್ರೋಲ್ ರೂಂ- 100 (0820) 2526444ನ್ನು ಸಂಪರ್ಕಿಸಲು ಪೊಲೀಸರು ಕೋರಿದ್ದಾರೆ.ವಂಡ್ಸೆ: ಚೀಟಿ ಬರೆದಿಟ್ಟು ಮಹಿಳೆ ನಾಪತ್ತೆ