ವಿಶ್ವ ಛಾಯಾಗ್ರಹಣ ದಿನಾಚರಣೆ: ಛಾಯಾ ಸಂಸ್ಕೃತಿ ವಿಶೇಷ ಕಾರ್ಯಕ್ರಮ

Update: 2023-08-21 14:16 GMT

ಉಡುಪಿ, ಆ.21: ಸೌತ್ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಶನ್ ಹಾಗೂ ಉಡುಪಿ ಮಲಬಾರ್ ಗೋಲ್ಡ್-ಡೈಮಂಡ್ಸ್ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಶನಿವಾರ ಮಲಬಾರ್ ಗೋಲ್ಡ್ ಉಡುಪಿ ಶಾಖೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಎಸ್‌ಕೆಪಿಎ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿತಿನ್ ಬೆಳುವಾಯಿ ಕೆಮೆರಾ ಕ್ಲಿಕ್ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಛಾಯಾ ಹಾಗೂ ಮಾಧ್ಯಮ ಕುರಿತು ಆಸ್ಟ್ರೋ ಮೋಹನ್, ಛಾಯಾ ನೃತ್ಯ ಕುರಿತು ಡಾ.ರಶ್ಮಿ ಗುರು ಮೂರ್ತಿ ಮತ್ತು ಛಾಯಾ ಕುಂಚದ ಕುರಿತು ಡಾ.ಜನಾರ್ದನ್ ಹಾವಂಜೆ ವಿಷಯ ಮಂಡಿಸಿದರು.

ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದೊಂದಿಗೆ ಏರ್ಪಡಿಸಿದ್ದ ಸೆಲ್ಫಿ ವಿಥ್ ತಿರಂಗ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವನ್ನು ಸಿದ್ದ ಬಸಯ್ಯ ಸ್ವಾಮಿ ಚಿಕ್ಕಮಠ ನೀಡಿದರು. ಉಡುಪಿ ವಲಯದ ಸಾರಥ್ಯವನ್ನು ವಹಿಸಿದ್ದ ಪೂರ್ವಾ ಧ್ಯಕ್ಷರುಗಳಾದ ಕೆ ವಾಸುದೇವ ರಾವ್, ಯು.ಕೆ.ಭಾಸ್ಕರ್, ರಂಜನ್ ಕಟಪಾಡಿ, ಪ್ರಸನ್ನ ಹೆಬ್ಬಾರ್, ಹರೀಶ್ ಕೆಮ್ಮಣ್ಣು, ಶ್ರೀಧರ್ ಶೆಟ್ಟಿ ಗಾರ್, ಸುಂದರ ಪೂಜಾರಿ, ಸುಕುಮಾರ್ ಕುಕ್ಕಿಕಟ್ಟೆ, ವಾಮನ ಪಡುಕೆರೆ, ಅನಿಶ್ ಶೆಟ್ಟಿಗಾರ್, ಪ್ರಕಾಶ್ ಕೊಡಂಕೂರು ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ., ಪತ್ರಕರ್ತ ಮೋಹನ್ ಉಡುಪ ಹಂದಾಡಿ, ಕೊಡವೂರು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಕೊಡವೂರು, ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಉಡುಪಿ ಶಾಖೆಯ ಮುಖ್ಯಸ್ಥ ಹಫೀಜ್ ರೆಹೆಮಾನ್, ಎಸ್‌ಕೆಪಿಎ ಜಿಲ್ಲಾ ಕಾರ್ಯದರ್ಶಿ ವಾಮನ ಪಡು ಕೆರೆ, ಪ್ರವೀಣ್ ಕೊರೆಯ, ಸುಧೀರ್ ಎಂ.ಶೆಟ್ಟಿ, ಪ್ರವೀಣ್ ಹೂಡೆ ಉಪಸ್ಥಿತರಿದ್ದರು.

ಅಂಜಲಿ ಉಪಾಧ್ಯ ಕಂಬಳಕಟ್ಟ ಪ್ರಾರ್ಥಿಸಿದರು. ಉಡುಪಿ ವಲಯಾಧ್ಯಕ್ಷ ಜನಾರ್ದನ್ ಕೊಡವೂರು ಸ್ವಾಗತಿಸಿದರು. ದಿವಾಕರ್ ಹಿರಿಯಡ್ಕ ವಂದಿಸಿದರು. ಪೂರ್ಣಿಮಾ ಜನಾರ್ದನ್ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News