ಕಾರವಾರ | ನಗರಸಭೆ ಮಾಜಿ ಸದಸ್ಯನನ್ನು ಚಾಕುವಿನಿಂದ ಇರಿದು ಕೊಲೆ

Update: 2025-04-20 10:45 IST
ಕಾರವಾರ |  ನಗರಸಭೆ ಮಾಜಿ ಸದಸ್ಯನನ್ನು ಚಾಕುವಿನಿಂದ ಇರಿದು ಕೊಲೆ
  • whatsapp icon

ಕಾರವಾರ: ಇಲ್ಲಿನ ನಗರಸಭೆಯ ಮಾಜಿ ಸದಸ್ಯರೊಬ್ಬರನ್ನು ಹಾಡಹಗಲೇ ರಸ್ತೆಮಧ್ಯೆ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಕಾರವಾರದ ಬಿಎಸ್ಸೆನ್ನೆಲ್ ಕಚೇರಿ ಬಳಿ ಇಂದು ಬೆಳಗ್ಗೆ ನಡೆದಿದೆ.

ಸತೀಶ್ ಕೊಳಂಬಕರ ಕೊಲೆಯಾದವರು. ಅವರು ಇಂದು ಬೆಳಗ್ಗೆ ವಾಕಿಂಗ್ ತೆರಳಿದ್ದ ವೇಳೆ ಈ ಕೊಲೆ ನಡೆದಿದೆ.

ಸತೀಶ ರವಿವಾರ ಬೆಳಗ್ಗೆ ಮಾರುಕಟ್ಟೆ ಬಳಿ ವಾಕಿಂಗ್ ಹೊರಟಿದ್ದರು. ಇದನ್ನು ಗಮನಿಸಿದ ಹಂತಕ ನಗರದ ಬಿಎಸ್ಸೆನ್ನೆಲ್ ಕಚೇರಿ ಸಮೀಪ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ನಗರದಲ್ಲಿ ರವಿವಾರ ಸಂತೆ ಮಾರುಕಟ್ಟೆ ಇರುವುದರಿಂದ ಜನರ ಓಡಾಟ ಹೆಚ್ಚೇ ಇತ್ತು. ಆದರೂ ಜನರ ನಡುವೆಯೇ ರಸ್ತೆಯಲ್ಲೇ ಸತೀಶ್ ರನ್ನು ಕೊಲೆಗೈದಿದ್ದಾನೆ. ಇದರಿಂದ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ದ್ವಿಚಕ್ರ ವಾಹನದಲ್ಲಿ ಆಗಮಿಸಿದ ದುಷ್ಕರ್ಮಿ ಈ ಕೃತ್ಯ ಎಸಗಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News