ಭಟ್ಕಳ: ಸರಗಳ್ಳತನ ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Update: 2025-04-19 19:21 IST
ಭಟ್ಕಳ: ಸರಗಳ್ಳತನ ಪ್ರಕರಣ; ಇಬ್ಬರು ಆರೋಪಿಗಳ ಬಂಧನ
  • whatsapp icon

ಭಟ್ಕಳ:  ಬಸ್ತಿಮಕ್ಕಿ ಮೂಕಾಂಬಿಕಾ ವಾಟರ್ ಸರ್ವಿಸ್ ಸಮೀಪ ನಡೆದ ಸರಗಳ್ಳತನ ಪ್ರಕರಣಕ್ಕೆ ಸಂಂಧಿಸಿದಂತೆ ಇಬ್ಬರು ಆರೋಪಿಗಳನ್ನು ಶಿರಸಿಯಲ್ಲಿ ಬಂಧಿಸುವಲ್ಲಿ ಮುರುಡೇಶ್ವರ ಪೊಲೀಸರು ಯಶಸ್ವಿಯಾಗಿದ್ದು ಕಳ್ಳತನ ಮಾಡಿದ ಮಾಂಗಲ್ಯ ಸರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ

ಬಂಧಿತ ಆರೋಪಿಗಳನ್ನು ಮಹೇಶ ತಪರಸಪ್ಪ ಕುರಿ (26), ಹಣಮಂತ ಶಿರಹಟ್ಟಿ ( 22 ) ಎಂದು ಗುರುತಿಸಲಾಗಿದೆ.

ಇವರು ಎ.17ರಂದು ಮಧ್ಯಾಹ್ನ ವೇಳೆ ಮುರ್ಡೇಶ್ವರದ ಬಸ್ತಿಮಕ್ಕಿಯಲ್ಲಿರುವ ಮೂಕಾಂಬಿಕಾ ವಾಟರ್ ಸರ್ವಿಸ್ ಹತ್ತಿರ ನಡೆದುಕೊಂಡು ಹೋಗುತ್ತಿದ್ದ ನಾಗಮ್ಮ ಸುಕ್ರ ಮೊಗೇರ ಅವರ ಮಾಂಗಲ್ಯ ಸರ ವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಮುರುಡೇಶ್ವರ ಠಾಣೆಯ ಪೊಲೀಸರು ಆರೋಪಿತರ ಪತ್ತೆಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ , ಉಪ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ ಎಂ ಹಾಗು ಭಟ್ಕಳ ಡಿ. ವೈಎಸ್ಪಿ ಮಹೇಶ ಕೆ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಭಟ್ಕಳ ಗ್ರಾಮೀಣ ಠಾಣೆಯ ಸಿ.ಪಿ.ಐ. ಸಂತೋಷ ಕಾಯ್ಕಿಣಿ, ಮುರುಡೇಶ್ವರ ಪೊಲೀಸ್ ಠಾಣೆ ಪಿ.ಎಸ್. ಐ ಹಣಮಂತ ಬಿರಾದಾರ ಹಾಗು ಸಿಬ್ಬಂದಿಗಳ ತಂಡ ರಚನೆ ಮಾಡಿಕೊಂಡು ತನಿಖೆ ಕೈಗೊಂಡು ಇಬ್ಬರು ಆರೋಪಿಗಳನ್ನು ಶಿರಸಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳಿಂದ ಕೃತ್ಯಕ್ಕೆ ಉಪಯೋಗಿಸಿದ ಬೈಕ್‌, ಹಾಗೂ ಬಂಗಾರದ ಮಾಂಗಲ್ಯ ಸರ, ಎರಡು ಮೊಬೈಲ್ ವಶಪಡಿಸಿಕೊಂಡಿದ್ದಾರೆ.

‌ 

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News