ವಿಜಯಪುರದ ಗೋಳಗುಮ್ಮಟ ಮ್ಯೂಸಿಯಂಗೆ ಹುಸಿ ಬಾಂಬ್ ಬೆದರಿಕೆ
Update: 2024-01-06 07:35 GMT
ವಿಜಯಪುರ: ಗೋಳಗುಮ್ಮಟ ಎದುರಿನ ಮ್ಯೂಜಿಯಂ ನೊಳಗೆ ಬಾಂಬ್ ಇಟ್ಟಿದ್ದೇವೆ ಎಂದು ಇ-ಮೇಲ್ ಮೂಲಕ ಬೆದರಿಕೆ ಹಾಕಿದ್ದರು. ತಪಾಸಣೆ ಬಳಿಕ ಇದೊಂದು ಹುಸಿ ಬಾಂಬ್ ಬೆದರಿಕೆ ಕರೆ ಎಂದು ತಿಳಿದುಬಂದಿದೆ.
ಮ್ಯೂಜಿಯಂನ ಹಲವು ಜಾಗಗಳಲ್ಲಿ ಬಾಂಬ್ ಇಟ್ಟಿರೋದಾಗಿ ಬೆದರಿಕೆಯನ್ನು ತಿಳಿಸಲಾಗಿತ್ತು.
ಟೆರರೈಸರ್ಸ್ ಹೆಸರಲ್ಲಿ ಇ-ಮೇಲ್ ಬಂದಿದ್ದು, ನಿನ್ನೆ ಸಂಜೆ ಇ-ಮೇಲ್ ಸಂದೇಶ ಗೋಳಗುಮ್ಮಟ ಸಿಬ್ಬಂದಿಗಳು ವೀಕ್ಷಿಸಿ, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಡರಾತ್ರಿ ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ ಮಾಡಿದ್ದಾರೆ. ಯಾವುದೇ ಬಾಂಬ್ ಪತ್ತೆ ಇಲ್ಲ, ಈ ಇ-ಮೇಲ್ ಸಂದೇಶದ ಕುರಿತು ಗೋಳಗುಮ್ಮಟ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.