ವಿಜಯಪುರ: ನ್ಯಾಯಾಲಯದ ಆವರಣದಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಆರೋಪಿ
Update: 2024-12-20 17:25 GMT
ವಿಜಯಪುರ: ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯೋರ್ವ ನ್ಯಾಯಾಲಯದ ಆವರಣದಲ್ಲೇ ಕತ್ತು ಕೊಯ್ದುಕೊಂಡ ಘಟನೆ ನಡೆದಿದೆ.
ಕತ್ತು ಕೊಯ್ದುಕೊಂಡ ಆರೋಪಿ ರಾಜು ಶಿವಾನಂದ ಹೊಸಮನಿ ಎಂಬಾತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ರಾಜು ಮೇಲೆ ನ್ಯಾಯಾಲಯದ ವಾರೆಂಟ್ ಕೂಡಾ ಇತ್ತು. ಆರೋಪಿಯನ್ನು ಬಂಧಿಸಿ ನ್ಯಾಯಾಧೀಶರ ಎದುರು ಹಾಜರುಪಡಿಸಲು ಜಿಲ್ಲಾ ನ್ಯಾಯಾಲಯಕ್ಕೆ ಕರೆತಂದಿದ್ದ ವೇಳೆ ತನ್ನ ಬಳಿಯಿದ್ದ ಬ್ಲೇಡ್ ನಿಂದ ಏಕಾಏಕಿ ಕತ್ತು ಕೊಯ್ದುಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.