ಯಾದಗಿರಿ | ಬಾಲಮೇಳಗಳು ಮಕ್ಕಳ ಕಲಿಕೆಗೆ ಪೂರಕ : ವೀರನಗೌಡ

Update: 2024-10-28 12:04 GMT

ಯಾದಗಿರಿ : ಮಗುವಿನ ಕಲಿಕೆ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಿಗೆ ಬಾಲಮೇಳಗಳು ಪೂರಕವಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ವೀರನಗೌಡ ಹೇಳಿದರು.

ಶಹಾಪುರ ತಾಲೂಕಿನ ಹತ್ತಿಗುಡೂರು ಗ್ರಾಮದ ಅಂಬೇಡ್ಕರ್ ನಗರದ ಪ್ರಾಥಮಿಕ ಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಜೊತೆಗೆ ಅಜಿಮ್ ಪ್ರೇಮ್ ಜಿ ಫೌಂಡೇಶನ್ ಯಾದಗಿರಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬಾಲಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಬೌದ್ಧಿಕ, ಕ್ರಿಯಾತ್ಮಕ, ಭಾಷಾಭಿವೃದ್ಧಿ, ಸಾಮಾಜಿಕ, ಭಾವನಾತ್ಮಕ ಅಭಿವೃದ್ಧಿಯ ಜೊತೆಗೆ ದೈಹಿಕ ಅಭಿವೃದ್ದಿಯತ್ತ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

ಸಮಾರಂಭದ ವೇದಿಕೆಯ ಮೇಲೆ ಪ್ರೇಮ ಮೂರ್ತಿ, ತಾಲೂಕು ಶಿಶು ಅಭಿವೃದ್ಧಿ ಇಲಾಖೆಯ ಯೋಜನೆ ಅಧಿಕಾರಿ ಯೋಗಿತಾಬಾಯಿ, ಪಿಡಿಒ ಭೋಜಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಷಣ್ಮುಖಪ್ಪ, ಅಜೀಮ್ ಪ್ರೇಮ್ ಜಿ ಫೌಂಡೇಶನ್ ಜಾನಕಿ ಹಾಗೂ ಹತ್ತಿಗೂಡೂರು ವಲಯದ ಅಂಗನವಾಡಿ ಮೇಲ್ವಿಚಾರಕಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News