ಯಾದಗಿರಿ | ಶಹಾಪುರದ 14 ಕಡೆ ಹತ್ತಿ ಖರೀದಿ ಕೇಂದ್ರ ಪ್ರಾರಂಭ

Update: 2024-11-12 11:26 GMT

ಯಾದಗಿರಿ : ಭಾರತೀಯ ಹತ್ತಿ ನಿಗಮದಿಂದ ಅನುಮತಿಸಲಾದ, ಕೃಷಿ ಉತ್ಪನ್ನ ಮಾರುಕಟ್ಟೆ ಅಧೀನದ ಶಹಾಪುರ ತಾಲ್ಲೂಕಿನಲ್ಲಿ ಒಟ್ಟು 14 ಕಾಟನ್ ಮಿಲ್ ಕೇಂದ್ರಗಳಲ್ಲಿ ಹತ್ತಿ ಖರೀದಿ ಕೆಂದ್ರಗಳಿಗೆ ಪರವಾನಿಗೆ ನೀಡಲಾಗಿದೆ ಎಂದು ಸಣ್ಣ ಕೈಗಾರಿಕಾ ಸಾರ್ವಜನಿಕ ಉದ್ಯಮಗಳ ಮಂತ್ರಿ ಶರಣ ಬಸಪ್ಪಗೌಡ ದರ್ಶನಪುರವರು ಹೇಳಿದ್ದಾರೆ.

ಹುಲಕಲ್ ಸಮೀಪದಲ್ಲಿರುವ ಮಣಿಕಂಠ ಕಾಟನ ಮಿಲ್ ಅವರಣದಲ್ಲಿ ಎರ್ಪಡಿಸಲಾದ ಭಾರತೀಯ ಹತ್ತಿ ನಿಗಮದ ಹತ್ತಿ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಸರಕಾರ ರೈತರಿಗೆ ಬೆಂಬಲ ಬೆಲೆ ನೀಡುತ್ತಿದ್ದು, ತೇವಾಂಶದ ಆಧಾರದಲ್ಲಿ ಹತ್ತಿ ವ್ಯಾಪಾರ ಮಾಡಲಾಗುತ್ತದೆ. ರೈತರು ತಮ್ಮ ಹತ್ತಿಯನ್ನು ಗುಣಮಟ್ಟವನ್ನಾಗಿಸಿಕೊಂಡು ಈ ಹತ್ತಿ ಖರೀದಿ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು ಮತ್ತು ರೈತರು ಅಕ್ರಮವಾಗಿ ಹಳ್ಳಿಗಳಲ್ಲಿ ಬರುವ ಹತ್ತಿ ಖರೀದಿದಾರರಿಂದ ಎಚ್ಚರ ವಹಿಸಬೇಕು ಎಂದು ಕರೆ ನೀಡಿದರು.

ಸಿಸಿಐ ಹತ್ತಿ ಖರೀದಿ ಕೆಂದ್ರದ ಅಧಿಕಾರಿ ಕಿರಣ್ ಪುರೋಹಿತ ಮಾತನಾಡಿ, ರೈತರು ನೇರವಾಗಿ ಹತ್ತಿ ಕೇಂದ್ರಕ್ಕೆ ಬಂದು ಪಾಣಿ ನೀಡಿ ಬ್ಯಾಂಕ್ ಪಾಸ್ ಬುಕ್ ಗೆ ಆಧಾರ ಲಿಂಕ್ ಮಾಡಿದ ಖಾತೆಯನ್ನು ನೀಡಿ ತಮ್ಮ ಬೆಳೆ ಖರೀದಿ ಹಣವನ್ನು ಖಾತೆಯಿಂದ ಪಡೆಯಬಹುದಾಗಿದೆ. ತಾಂತ್ರಿಕ ತೊಂದರೆಗಳು ಉಂಟಾದಲ್ಲಿ ಸಮಸ್ಯೆಗೆ ಸ್ಪಂದನೆ ನೀಡಿ ರೈತರಿಗೆ ಅನೂಕೂಲ ಮಾಡಿಕೊಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷರಾದ ಕಾಂತು ಪಾಟೀಲ್, ಎ.ಪಿ.ಎಮ್.ಸಿ ಅಧ್ಯಕ್ಷರಾದ ಬಸ್ಸಮ್ಮ ಸಗರ, ಉಪಾದ್ಯಕ್ಷರಾದ ಬಸವರಾಜ ಹಯ್ಯಾಳ ಬಿ., ಮುಖಂಡರಾದ ಸಿದ್ದಲಿಂಗಣ್ಣ ಆನೆಗುಂದಿ, ಕರವೇ ಉತ್ತರ ಕರ್ನಾಟಕ ಅಧ್ಯಕ್ಷರಾದ ಶರಣು ಗದ್ದುಗೆ, ಶಿವಮಾಂತ ಚಂದಾಪುರ, ಶರಣು ಮಂದರವಾಡ್, ಮಲ್ಲಪ್ಪ ಗೋಗಿ, ಸೇರಿದಂತೆ ಎ.ಪಿ.ಎಮ್.ಸಿ ಅಧಿಕಾರಿಗಳು ರೈತರು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News