ಒನಕೆ ಓಬವ್ವ ತೋರಿದ ಧೈರ್ಯ- ಸಾಹಸ ಸ್ಮರಣೀಯ : ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್

Update: 2024-11-11 12:07 GMT

ಯಾದಗಿರಿ : ವೀರವನಿತೆ ಒನಕೆ ಓಬವ್ವ ಅವರು ಸ್ವಾಮಿನಿಷ್ಠೆ ಹಾಗೂ ಸಮಯಪ್ರಜ್ಞೆ ಮೂಲಕ ಚಿತ್ರದುರ್ಗದ ಕೋಟೆ ರಕ್ಷಣೆಗೆ ತೋರಿದ ಧೈರ್ಯ- ಸಾಹಸ ಸ್ಮರಣೀಯವಾಗಿದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್‌ ಅವರು ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ "ಒನಕೆ ಓಬವ್ವ ಜಯಂತಿ" ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾನ್ಯ ಗೃಹಿಣಿ ಎನಿಸಿಕೊಂಡಿದ್ದ ಒನಕೆ ಓಬವ್ವ, ಇತಿಹಾಸದ ಪುಟಗಳಲ್ಲಿ ಆವರಿಸಿಕೊಂಡಿದ್ದೆ ರೋಮಾಂಚಕ ಕಥನ. ಚಲವಾದಿ ಸಮುದಾಯದ ಓಬವ್ವ, ಸ್ವಾಮಿ ನಿಷ್ಠೆ, ಸಮಯ ಸ್ಪೂರ್ತಿ ಮತ್ತು ತ್ಯಾಗದ ತ್ರಿವೇಣಿ ಸಂಗಮ. ಚಿತ್ರದುರ್ಗದ ಕೋಟೆಯ ಮುತ್ತಿಗೆಗೆ ಯತ್ನಿಸಿದ ಹೈದರ್-ಅಲಿ ಕುತಂತ್ರವನ್ನು ವಿಫಲಗೊಳಿಸಿ ಕೋಟೆ ಮತ್ತು ಜನತೆಯನ್ನು ಅಪಾಯದಿಂದ ಪಾರು ಮಾಡಿದವರು ವೀರವನಿತೆ ಓಬವ್ವ ಎಂದು ಹೇಳಿದರು.

ಈ ಸಂದರ್ಭದಲ್ಲಿ ಯಾದಗಿರಿ ತಹಸೀಲ್ದಾರ್ ಸುರೇಶ್ ಅಂಕಲಗಿ, ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ನಿವೃತ್ತ ಪ್ರಾಂಶುಪಾಲ ಸರ್ವೋದಯ ಎಸ್.ಎಸ್., ವೀರ ವನಿತೆ ಒನಕೆ ಒಬ್ಬವ ಸಮಿತಿ ಜಿಲ್ಲಾಧ್ಯಕ್ಷರಾದ ಗೋಪಾಲ್ ತಳಿಗೇರಿ, ಶಿವಕುಮಾರ್ ಬಂದಳ್ಳಿ, ಚಂದ್ರಕಾಂತ್ ಮುನಿಯಪ್ಪ ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾ ದೇವಿ ಮಠಪತಿ, ಮುಖಂಡರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News