ಯಾದಗಿರಿ ಜಿಲ್ಲಾ ಕ್ರಷರ್, ಕ್ವಾರಿ ಮಾಲಕರ ಸಂಘ ಅಸ್ತಿತ್ವಕ್ಕೆ, ನೂತನ ಪದಾಧಿಕಾರಿಗಳ ಆಯ್ಕೆ

Update: 2025-03-17 19:10 IST
ಯಾದಗಿರಿ ಜಿಲ್ಲಾ ಕ್ರಷರ್, ಕ್ವಾರಿ ಮಾಲಕರ ಸಂಘ ಅಸ್ತಿತ್ವಕ್ಕೆ, ನೂತನ ಪದಾಧಿಕಾರಿಗಳ ಆಯ್ಕೆ
  • whatsapp icon

ಯಾದಗಿರಿ : ನಗರದ ಹಳೆ ಐಬಿ(ಪ್ರವಾಸಿ ಮಂದಿರ)ದಲ್ಲಿ ಸೋಮವಾರ ಕ್ರಷರ್ ಹಾಗೂ ಕ್ವಾರಿ ಮಾಲಕರ ಸಂಘದ ಯಾದಗಿರಿ ಜಿಲ್ಲಾ ಘಟಕ ಅಸ್ತಿತ್ವಕ್ಕೆ ತರಲಾಯಿತು.

ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ರವೀಂದ್ರ ನಾಯಕ, ಯಾದಗಿರಿ ತಾಲ್ಲೂಕು ಅಧ್ಯಕ್ಷರಾಗಿ ಮಲ್ಲು ಮಾಳಿಕೇರಿಯರವನ್ನು ಆಯ್ಕೆ ಮಾಡಲಾಯಿತು.

ಈ ವೇಳೆಯಲ್ಲಿ ಮಾತನಾಡಿದ, ಯಾದಗಿರಿ ತಾಲೂಕು ಅಧ್ಯಕ್ಷ ಮಲ್ಲು ಮಾಳಿಕೇರಿ, ಸಂಘದ ರಚನೆ ಮತ್ತು ಉದ್ದೇಶಗಳು ಪ್ರತಿಯೊರ್ವ ಮಾಲಕರು ಮತ್ತು ಸಿಬ್ಬಂದಿಗಳ ಹಿತಕಾಪಾಡುವುದಾಗಿದೆ ಆಗಿದ್ದು, ನಮ್ಮಲ್ಲಿರುವ ಪ್ರತಿಯೊಬ್ಬರ ಹಕ್ಕು ಬಾದ್ಯತೆಗಳನ್ನು ಕಾಪಾಡೋದು ಮತ್ತು ಸರ್ಕಾರದ ನಿಯಮದಂತೆ ಕಾರ್ಯಚಟುವಟಿಕೆಗಳನ್ನು ನಡೆಸುವುದಾಗಿದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಲಿಂಗಾರಡ್ಡಿ ಮಾನೆಗಾರ, ಮಲ್ಲಯ್ಯ ಜಲಾಲ, ವೆಂಕಟೇಶ ಮಿಲ್ಟ್ರಿ, ಎಮ್. ಡಿ ಸೋಫಿ, ಸೋನು ಅಂಬದಾಸ್, ಎಮ್.ಡಿ ಸೋಹೇಲ್, ಅಜಯ್ ದಶರಥ ನಾಯಕ, ಕಾಶಪ್ಪ ಮಾದ್ವಾರ್, ಶ್ರೀಮಂತ ಕಟ್ಟಿಮನಿ ಸೇರಿದಂತೆ ಇತರರಿದ್ದರು.

ನೂತನ ಪದಾಧಿಕಾಗಿಳ ಆಯ್ಕೆ :

ಜಿಲ್ಲಾ ಉಪಾಧ್ಯಕ್ಷರಾಗಿ ಅಬ್ದುಲ್ ಸಮದ್, ಅಬ್ದುಲ್ ಮಜಿದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಶೈಲ್, ಜಿಲ್ಲಾ ಕಾರ್ಯದರ್ಶಿಯಾಗಿ ಅಕ್ತರ್, ಖಜಾಂಚಿ ಹಣಮಂತ ಶಹಾಪುರ, ಯಾದಗಿರಿ ತಾಲೂಕು ಉಪಾಧ್ಯಕ್ಷರಾಗಿ ಶಂಕರ ಗೋಸಿ ರವರನ್ನು ಆಯ್ಕೆ ಮಾಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News